ಹಿರಿಯೂರಿನಲ್ಲಿ ಸಂಭ್ರಮದ ಅಂಬಿನೋತ್ಸವ

ಭಾನುವಾರ, ಜೂನ್ 16, 2019
28 °C

ಹಿರಿಯೂರಿನಲ್ಲಿ ಸಂಭ್ರಮದ ಅಂಬಿನೋತ್ಸವ

Published:
Updated:
ಹಿರಿಯೂರಿನಲ್ಲಿ ಸಂಭ್ರಮದ ಅಂಬಿನೋತ್ಸವ

ಹಿರಿಯೂರು: ನಗರದ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಬನ್ನಿ ಮಂಟಪದ ಬಳಿ ಶನಿವಾರ ಸಂಜೆ ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ಅವರು ಸಾಂಪ್ರದಾಯಿಕ ವೇಷ ಧರಿಸಿ, ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸಿದ್ದ ಬಿಲ್ಲಿನ ಹೆದೆಗೆ ಬಾಣ ಹೂಡಿ ಬಿಡುವ ಮೂಲಕ ಅಂಬಿನೋತ್ಸವಕ್ಕೆ ಚಾಲನೆ ನೀಡಿದರು.

ಅಂಬು ಹೊಡೆಯುವ ಕಾರ್ಯಕ್ರಮ ಸಂಜೆ 4 ಗಂಟೆಗೆ ಎಂದು ಪ್ರಕಟಣೆ ಹೊರಡಿಸಿದ್ದರೂ ಉತ್ಸವಕ್ಕೆ ಬರಬೇಕಿದ್ದ ದೇವರ ವಿಗ್ರಹಗಳು ಆಗಮಿಸುವ ವೇಳೆಗೆ ಸಂಜೆ 5.45 ಆಗಿತ್ತು. ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ತಂದಿದ್ದ ಬಿಲ್ಲು ಬಾಣವನ್ನು ತಹಶೀಲ್ದಾರರು ಬನ್ನಿ ಮರದಿಂದ ನಗರದೇವತೆಗಳನ್ನು ಕುಳ್ಳಿರಿಸಿದ್ದ ಸ್ಥಳದವರೆಗೆ ಹೊಡೆಯುತ್ತ ಹೋದರು.

ಸಂಸತ್ ಸದಸ್ಯ ಬಿ.ಎನ್. ಚಂದ್ರಪ್ಪ, ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ದಾದಾಪೀರ್, ಜಿಲ್ಲಾ ಪಂಚಾಯ್ತಿ ಸದಸ್ಯ ಆರ್. ನಾಗೇಂದ್ರನಾಯ್ಕ, ಬನ್ನಿಮಂಟಪ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಪ್ಪ, ಪಾಲನಾಯಕ, ಕೇಶವಮೂರ್ತಿ, ರವಿ, ಗಿರಿ, ಸುರೇಶ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬನ್ನಿ ಮರದ ಕೆಳಗೆ ಇರುವ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದಂತೆಯೇ ಭಕ್ತರು ಮರದಿಂದ ‘ಬನ್ನಿ’ ಪತ್ರೆ ಕಿತ್ತು ಪರಸ್ಪರ ಹಂಚುವ ಮೂಲಕ ಸ್ನೇಹ-ಪ್ರೀತಿಯ ವಿನಿಮಯ ಮಾಡಿಕೊಂಡರು.

ಪ್ರಮುಖ ದೇವತೆಗಳ ಸನ್ನಿಧಿಯಲ್ಲಿ ಅಂಬು: ಬನ್ನಿ ಮಂಟಪದ ಆವರಣಕ್ಕೆ ನಗರದ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ರಾಜಾ

ದುರ್ಗಾಪರಮೇಶ್ವರಿ, ರೇವಣ ಸಿದ್ದೇಶ್ವರಸ್ವಾಮಿ, ಬನಶಂಕರಿ ಅಮ್ಮ, ಹೊಸೂರಮ್ಮ, ಲಕ್ಷ್ಮೀನರಸಿಂಹಸ್ವಾಮಿ, ಪೌದಿಯಮ್ಮ ದೇವತೆಗಳು ಬಂದು ಸೇರುವುದು ಅಂಬಿನೋತ್ಸವದಲ್ಲಿ ಮಾತ್ರ.

ಆಯಾ ದೇವರುಗಳ ಭಕ್ತರು ಚರ್ಮ ವಾದ್ಯಗಳ ಮೆರವಣಿಗೆಯಲ್ಲಿ ದೇವತೆಗಳನ್ನು ಕರೆತಂದು ಪೂಜಾ ಸಮಿತಿಯಿಂದ ವಿಶೇಷವಾಗಿ ವ್ಯವಸ್ಥೆ ಮಾಡಿದ್ದ ಸ್ಟ್ಯಾಂಡ್‌ಗಳ ಮೇಲೆ ಕುಳ್ಳಿರಿಸಿದರು. ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಅವರು ಅಂಬಿನೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry