ಅದ್ಧೂರಿಯ ದಸರಾ ಮೂಲ ಜಂಬೂ ಸವಾರಿ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಅದ್ಧೂರಿಯ ದಸರಾ ಮೂಲ ಜಂಬೂ ಸವಾರಿ

Published:
Updated:

ಧಾರವಾಡ: ಇಲ್ಲಿನ ಸಾರಸ್ವತಪುರ ಗೌಳಿಗಲ್ಲಿಯ ಮಾರುತಿ ದೇವಸ್ಥಾನ ವಿಶ್ವಸ್ಥ ಮಂಡಳಿಯಿಂದ ಶನಿವಾರ ನಗರದಲ್ಲಿ ಧಾರವಾಡ ದಸರಾ ಮೂಲ ಜಂಬೂ ಸವಾರಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ನಗರದ ಜನತೆ ಜಂಬೂ ಸವಾರಿ ಮೆರವಣಿಗೆಯನ್ನು ನೋಡಿ ಆನಂದಿಸಿದರು.

ಧಾರವಾಡ ದಸರಾ ಮೂಲ ಜಂಬೂಸವಾರಿ ಮೆರವಣಿಗೆಗೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಮಾರುತಿ ದೇವಸ್ಥಾನದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಯಲ್ಲಿ ನಡೆದ ಉತ್ಸವ ಉದ್ಘಾಟನಾ ಸಮಾರಂಭದ ನಂತರ ಮಲ್ಲಿಕಾರ್ಜುನ ಸ್ವಾಮೀಜಿ ಅವರು, ಆಂಜನೇಯ ಮೂರ್ತಿ ಹೊತ್ತಿದ್ದ ಗಜರಾಜನಿಗೆ ಪುಷ್ಪಾರ್ಪಣೆ ಮಾಡಿದರು.

ಬಳಿಕ ಸರಸ್ವತಪುರ ಗೌಳಿಗಲ್ಲಿ ಮಾರುತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರೈಲ್ವೆ ನಿಲ್ದಾಣ ರಸ್ತೆ, ಮಹಿಷಿ ರಸ್ತೆ, ಬಾಗಲಕೋಟ ಪೆಟ್ರೋಲ್ ಬಂಕ್, ಹೊಸಯಲ್ಲಾಪುರ, ಗಾಂಧಿಚೌಕ್, ಕಲಾಭವನ ಮಾರ್ಗವಾಗಿ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಕ್ಕೆ ಆಗಮಿಸಿ ಅಲ್ಲಿ ಮುಕ್ತಾಯಗೊಂಡಿತು.

ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಗೊಂಬೆಗಳು, ಡೊಳ್ಳು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಕಲಾ ಪ್ರಕಾರಗಳು ಮೇಳದುದ್ದಕ್ಕೂ ತಮ್ಮ ಕಲೆಯ ಪ್ರದರ್ಶನ ನೀಡಿದರು. ಮಳೆಯಿಂದಾಗಿ ಕೆಲ ಕಾಲ ಮೇಳಕ್ಕೆ ಅಡಚಣೆ ಉಂಟಾಯಿತು.

ಮಳೆಗೆ ಜಗ್ಗದೆ ಕಲಾತಂಡಗಳು ಪ್ರದರ್ಶನ ನೀಡಿದರೆ, ಜನರು ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು. ನಂತರ ದುರ್ಗಾದೇವಿ ದೇವಸ್ಥಾನದಲ್ಲಿ ಅಧಿದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಬನ್ನಿ ಮುರಿಯುವ ಕಾರ್ಯ ನಡೆಯಿತು. ಕಾಂಗ್ರೆಸ್‌ ಮುಖಂಡರಾದ ಎಸ್.ಆರ್. ಮೋರೆ, ದಾನಪ್ಪ ಕಬ್ಬೇರ, ಮನೋಜ ಕರ್ಜಗಿ, ಪಾಲಿಕೆ ಸದಸ್ಯ ಬಸವರಾಜ ಮುತ್ತಳ್ಳಿ ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry