ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜೈನ ವಿದ್ವತ್‌ ಸಮ್ಮೇಳನ

Last Updated 1 ಅಕ್ಟೋಬರ್ 2017, 7:15 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಪಟ್ಟಣದ ಗೊಮ್ಮಟನಗರದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ಅ. 1ರಿಂದ 5 ರವರೆಗೆ ರಾಷ್ಟ್ರ ಮಟ್ಟದ ಜೈನ ವಿದ್ವತ್‌ ಸಮ್ಮೇಳನ ನಡೆಯಲಿದೆ. 1ರಂದು ಬೆಳಿಗ್ಗೆ 9ಕ್ಕೆ ಮಠದ ಚಾವುಂಡರಾಯ ಸಭಾ ಮಂಟಪದಲ್ಲಿ ಮಂಗಳ ಕಲಶ ಸ್ಥಾಪನೆ, ಅಭಿಷೇಕ ಪೂಜೆಯೊಂದಿಗೆ ವಿದ್ವಾಂಸರ ಮತ್ತು ಕಲಾ ತಂಡಗಳ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಸಂಸದ ಎಚ್‌.ಡಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸುವರು.

ಡಾ. ಶ್ರೇಯಾಂಸ್‌ ಕುಮಾರ್‌ ಜೈನ್‌ ಸಮ್ಮೇಳನಾಧ್ಯಕ್ಷರಾಗಿರುವರು. ಅತಿಥಿಗಳಾಗಿ ಮುಂಬೈ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಾಲಚಂದ್ರ ವಗ್ಯಾನಿ, ಸಾಹಿತಿ ಡಾ.ಕಮಲಾ ಹಂಪನಾ, ವಿಶೇಷ ಆಹ್ವಾನಿತರಾಗಿ ಶಾಸಕರಾದ ಸಿ.ಎನ್‌.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ ಬರುವರು. ವಸ್ತು ಪ್ರದರ್ಶನವನ್ನು ಇಂದೂರಿನ ಆರ್‌.ಕೆ.ಜೈನ್‌ ರಾನೇಕಾ ನೆರವೇರಿಸುವರು.

ವಿವಿಧ ರಾಜ್ಯಗಳಿಂದ 400ಕ್ಕೂ ಹೆಚ್ಚು ವಿದ್ವಾಂಸರು ಕ್ಷೇತ್ರಕ್ಕೆ ಬಂದಿದ್ದು, 150ಕ್ಕೂ ಹೆಚ್ಚು ವಿದ್ವಾಂಸರು ಪ್ರಬಂಧ ಮಂಡನೆ ಮಾಡಲಿದ್ದಾರೆ. ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನ ಸಂದರ್ಭದಲ್ಲಿ ಪುಸ್ತಕಗಳ ಲೋಕಾರ್ಪಣೆ, ಪ್ರಾಚೀನ ವಿದ್ವಾಂಸರ ಮೇಲೆ ಬೆಳಕು ಚೆಲ್ಲುವ ಪುಸ್ತಕಗಳು, ಓಲೆಗರಿ ಗ್ರಂಥಗಳ ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT