ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಶಾಂಪೂ, ಸೋಪ್ , ಪೇಸ್ಟ್‌ ತಯಾರಿಕೆ

Last Updated 1 ಅಕ್ಟೋಬರ್ 2017, 9:09 IST
ಅಕ್ಷರ ಗಾತ್ರ

ಮಂಡ್ಯ: ಯಾವುದೇ ರಾಸಾಯನಿಕ ಬಳಸದೆ ಪ್ರಾಕೃತಿಕವಾಗಿ ದೊರೆಯುವ ಗಿಡಮೂಲಿಕೆಗಳಿಂದ ನೈಸರ್ಗಿಕವಾಗಿ ಮನೆ ಬಳಕೆಯ ಸೋಪ್‌, ಶಾಂಪೂ, ಪೇಸ್ಟ್‌, ಮೇಣದ ಬತ್ತಿ, ಬ್ಲೀಚಿಂಗ್‌ ಪೌಡರ್‌ ಮುಂತಾದ ವಸ್ತುಗಳನ್ನು ನಗರದ ಗುತ್ತಲು ಬಡಾವಣೆಯ ಬಿ.ಕೆ.ಬಸವರಾಜ್‌ ಅತೀ ಕಡಿಮೆ ಖರ್ಚಿನಲ್ಲಿ ತಯಾರಿಸುತ್ತಾರೆ.

ಬಳಪದ ಕಲ್ಲಿನ ಪುಡಿಯಿಂದ (ಡಿ.ಪಿ.ಪೌಡರ್‌) 40ಕ್ಕೂ ಹೆಚ್ಚು ವಸ್ತುಗಳನ್ನು ತಯಾರಿಸುವ ಇವರು ಮರಗಳಲ್ಲಿ ದೊರೆಯುವ ಅಂಟು, ಲೋಳೆಸರ, ಬೇವಿನ ಎಲೆ, ತುಳಸಿ ಎಲೆ, ಲವಂಗ, ಹೊಂಗೆ ಬೀಜ ಮುಂತಾದ ವಸ್ತುಗಳನ್ನು ಹದ ಮಾಡಿ ಮನೆಬಳಕೆಯ ವಸ್ತು ತಯಾರಿಸುತ್ತಾರೆ.

ಮಲ್ಲಿಗೆ, ಗುಲಾಬಿ ಮತ್ತಿತರ ಹೂವುಗಳಿಂದ ಪರಿಮಳ ತಯಾರಿಸುವ ಅವರು ಸೋಪು, ಶಾಂಪೂಗಳಿಗೆ ಸುವಾಸನೆ ತುಂಬುತ್ತಾರೆ. ಜಾಲಿ ಮರದ ಅಂಟು, ಉಪ್ಪು, ಬಳಪದ ಕಲ್ಲಿನ ಪುಡಿಯಿಂದ ಸರ್ಫ್‌, ಸೋಪಿನ ಪೌಡರ್‌ ತಯಾರಿಸುವ ಅವರು ಮಲ್ಲಿಗೆ ಹೂವನ್ನು ಹದ ಮಾಡಿ ಪರಿಮಳ ತುಂಬುತ್ತಾರೆ. ಬಟ್ಟೆ ತೊಳೆದ ನಂತರ ಹಾಕುವ ‘ಕಂಫರ್ಟ್‌’ ದ್ರವವನ್ನು ಮೈದಾ ಹಿಟ್ಟು, ಸಕ್ಕರೆ ಪಾಕ, ಉಪ್ಪಿನಿಂದ ತಯಾರಿಸುತ್ತಾರೆ.

ಗಾಜು ಒರೆಸುವ ಕ್ಲೀನರ್‌, ಫೆನಾಯಿಲ್‌, ಬಾತ್‌ ರೂಂ ಕ್ಲೀನರ್‌, ಕರ್ಪೂರ, ಶೇವಿಂಗ್‌ ಕ್ರೀಂ ಸೇರಿದಂತೆ 50ಕ್ಕೂ ಹೆಚ್ಚು ವಸ್ತುಗಳನ್ನು ತಯಾರಿಸುವ ಬಸವರಾಜ್‌ ಕೇವಲ ಪಿ.ಯು ವರೆಗೆ ಓದಿದ್ದಾರೆ. 15 ವರ್ಷಗಳ ಕಾಲ ನಗರದಲ್ಲಿ ಔಷಧ ತಾಯಾರಿಕಾ ಕಂಪೆನಿಯಲ್ಲಿ ಕೆಲಸ ಮಾಡಿರುವ ಅವರು ರಾಸಾಯನಿಕ ಬಳಸದೇ ಮನೆಬಳಕೆಯ ವಸ್ತುಗಳನ್ನು ತಯಾರಿಸುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಅವರು ಕೆಲಸ ಮಾಡುತ್ತಿದ್ದ ಕಂಪೆನಿ ಬಾಗಿಲು ಮುಚ್ಚಿದ ನಂತರ 10 ವರ್ಷಗಳಿಂದ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ, ಸ್ವಯಂ ಸೇವಕರಿಗೆ ಕಡಿಮೆ ಖರ್ಚಿನಲ್ಲಿ ಮನೆಬಳಕೆಯ ವಸ್ತುಗಳ ತಯಾರಿಕೆ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಪ್ರತಿ ವಸ್ತು ತಯಾರಿಸಿದ ನಂತ ಪಿ.ಎಚ್‌ ಪೇಪರ್‌ ಬಳಸಿ ಗುಣಮಟ್ಟ ಪರೀಕ್ಷೆ ಮಾಡುತ್ತಾರೆ. ಹಲವು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಬಸವರಾಜ್‌ ಶಾಂಪೂ ತಯಾರಿಸುವುದನ್ನು ಕಲಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT