ಮೂಡುಬಿದಿರೆ ಮಾರುಕಟ್ಟೆ ಕಾಮಗಾರಿ ಸ್ಥಗಿತ

ಸೋಮವಾರ, ಜೂನ್ 24, 2019
24 °C

ಮೂಡುಬಿದಿರೆ ಮಾರುಕಟ್ಟೆ ಕಾಮಗಾರಿ ಸ್ಥಗಿತ

Published:
Updated:

ಮೂಡುಬಿದಿರೆ: ಸ್ವರಾಜ್ಯ ಮೈದಾನ ದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾ ಣವಾಗುತ್ತಿರುವ ಪುರಸಭೆಯ ತಾತ್ಕಾಲಿಕ ಮಾರುಕಟ್ಟೆ ಕಾಮಗಾರಿಯನ್ನು ಶನಿವಾರ ಮಧ್ಯಾಹ್ನದಿಂದ ನಿಲ್ಲಿಸಲಾಗಿದೆ.

ಶನಿವಾರ ಕೋರ್ಟ್‌ ಆದೇಶ ಕೈ ಸೇರಿದ ಮೇರೆಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರು ಪೊಲೀಸ ರೊಂದಿಗೆ ಶನಿವಾರ ಮಧ್ಯಾಹ್ನ ಸ್ವರಾಜ್ಯ ಮೈದಾನಕ್ಕೆ ತೆರಳಿ, ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದರು. ಇದರಿಂದ ಕಾಮಗಾರಿ ಸ್ಥಗಿತಗೊಂಡಿದೆ.

ಆರು ವಾರ ಯಥಾಸ್ಥಿತಿಗೆ ಆದೇಶ: ರಕ್ಷಣಾ ಇಲಾಖೆಗೆ ಸೇರಿದ ಸುಮಾರು 28 ಎಕರೆ ವಿಸ್ತೀರ್ಣದ ಸ್ವರಾಜ್ಯ ಮೈದಾನವನ್ನು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆ ಜಿಲ್ಲಾಧಿಕಾರಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದನ್ನು ಸುದರ್ಶನ್ ಎಂ., ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಕುರಿತು ಆದೇಶ ನೀಡಿರುವ ಹೈಕೋರ್ಟ್‌, 6 ವಾರಗಳವರೆಗೆ ಸ್ವರಾಜ್ಯ ಮೈದಾನದಲ್ಲಿ ಯಾವುದೇ ಕಾಮಗಾರಿ ಗಳನ್ನು ನಡೆಸದಂತೆ ಆದೇಶಿಸಿದ್ದು, ಅಲ್ಲಿಯವರೆಗೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸೂಚಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry