ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1) ಅಂಗವಿಕಲರ ಸಬಲೀಕರಣ ಹಾಗೂ ಅವರ ಸರ್ಕಾರಿ ಯೋಜನೆಗಳ ಮಾಹಿತಿಗಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಯಾವ ಮೊಬೈಲ್ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ?
a) ದಿವ್ಯಾಂಗ ಆ್ಯಪ್ b) ದಿವ್ಯಾಂಗ ಸಾರಥಿ ಆ್ಯಪ್
c) ದಿವ್ಯಾಂಗ ದಿಕ್ಸೂಚಿ ಆ್ಯಪ್
d) ದಿವ್ಯಾಂಗ ಚೇತನ ಆ್ಯಪ್

2) ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 'ಪೆನ್ಸಿಲ್’(ಪಿಇಎನ್‌ಸಿಐಎಲ್) ಎಂಬ ವಿಶೇಷ ವೆಬ್‌ಸೈಟ್‌ (ಪೋರ್ಟಲ್) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?
a) ಬಾಲಕಾರ್ಮಿಕರು
b) ಹಿರಿಯ ನಾಗರಿಕರು
c) ಮಹಿಳೆಯರು
d) ಕೃಷಿ ಕಾರ್ಮಿಕರು

3) ರಾಜೀವ್ ಮಹರ್ಷಿ ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಂಡಿದ್ದಾರೆ. ಇವರ ಹಿಂದಿನ ಸಿಎಜಿ ಯಾರು? 
a) ರಮಾಕಾಂತ್ ವರ್ಮಾ
b) ವಿನೋದ್ ರಾಯ್ c) ವಿ. ಎನ್‌. ಕೌಲ್
d) ಶಶಿಕಾಂತ್ ಶರ್ಮಾ

4) 2017ರ ನವೆಂಬರ್ ತಿಂಗಳಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ ಚಂಪಾ ಆಯ್ಕೆಯಾಗಿದ್ದಾರೆ. ಈ ಕೆಳಕಂಡವುಗಳಲ್ಲಿ ಅವರ ಕೃತಿಯನ್ನು ಗುರುತಿಸಿ?
a) ಟಿಂಗರ ಬುಡ್ಡಣ್ಣ
b) ಗೋಕರ್ಣದ ಗೌಡಸಾನಿ 
c) ಕುಂಟ ಕುಂಟ ಕುರುವತ್ತಿ
d) ಮೇಲಿನ ಎಲ್ಲವೂ

5) ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನಕ್ಕಾಗಿ ‘ದೀನದಯಾಳ್ ಹಸ್ತಕಲಾ ಸಂಕುಲ ಮ್ಯೂಸಿಯಂ’ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ? 
a) ವಾರಣಾಸಿ b) ಜೈಪುರ
c) ಅಹಮದಾಬಾದ್ d) ಬೆಂಗಳೂರು

6) ಇತ್ತೀಚೆಗೆ ರೋಹಿಂಗ್ಯಾ ಮುಸ್ಲಿಮರ ವಲಸೆ ಬಿಕ್ಕಟ್ಟು ಅಂತರರಾಷ್ಟ್ರೀಯ ಗಮನ ಸೆಳೆದಿದೆ. ರೋಹಿಂಗ್ಯಾಗಳು ಯಾವ ದೇಶದವರು?
a) ಭಾರತ b) ಥೈಲ್ಯಾಂಡ್
c) ಮ್ಯಾನ್ಮಾರ್‌ d) ಬಾಂಗ್ಲಾದೇಶ

7) ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇ–ಬಸ್‌ ಸೇವೆಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ? 
a) ಅರುಣಾಚಲ ಪ್ರದೇಶ
b) ಉತ್ತರಪ್ರದೇಶ
c) ಮಧ್ಯಪ್ರದೇಶ
d) ಹಿಮಾಚಲ ಪ್ರದೇಶ

8) ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸರ್ದಾರ್ ಸರೋವರ ಜಲಾಶಯದ ಫಲಾನುಭವಿ ರಾಜ್ಯಗಳನ್ನು ಗುರುತಿಸಿ?
a) ಆಂಧ್ರಪ್ರದೇಶ–ಗುಜರಾತ್–ರಾಜಸ್ತಾನ
b) ಗುಜರಾತ್–ಮಧ್ಯಪ್ರದೇಶ–ಮಹಾರಾಷ್ಟ್ರ
c) ಉತ್ತರಪ್ರದೇಶ–ಗುಜರಾತ್–ರಾಜಸ್ತಾನ
d) ಮಹಾರಾಷ್ಟ್ರ–ತೆಲಂಗಾಣ–ಒಡಿಶಾ

9) ಭಾರತದಲ್ಲಿ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿಗೆ ಈ ಕೆಳಕಂಡ ಯಾವ ರೈಲು ನಿಲ್ದಾಣದಲ್ಲಿ ಅಡಿಗಲ್ಲನ್ನು ಹಾಕಲಾಯಿತು?
a) ಮುಂಬೈ ರೈಲು ನಿಲ್ದಾಣ
b) ಸೂರತ್ ರೈಲು ನಿಲ್ದಾಣ 
c) ಸಾಬರಮತಿ ರೈಲು ನಿಲ್ದಾಣ 
d) ವಡೋದರ ರೈಲು ನಿಲ್ದಾಣ

10) ಸಿಂಗಾಪುರದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಹಲೀಮತ್ ಯಾಕೂಬ್ ಅವರು ಮೂಲತಃ ಯಾವ ದೇಶದವರು? 
a) ಭಾರತ b) ಪಾಕಿಸ್ತಾನ
c) ಬಾಂಗ್ಲಾದೇಶ d) ಈಜಿಪ್ಟ್‌

ಉತ್ತರಗಳು: 1-b, 2-a, 3- d, 4-d, 5-a, 6-c, 7-d, 8-b, 9-c, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT