ವಿದ್ಯಾಗೆ ಬಂಗಾಲಿ ಇಷ್ಟವಂತೆ

ಸೋಮವಾರ, ಮೇ 20, 2019
32 °C

ವಿದ್ಯಾಗೆ ಬಂಗಾಲಿ ಇಷ್ಟವಂತೆ

Published:
Updated:
ವಿದ್ಯಾಗೆ ಬಂಗಾಲಿ ಇಷ್ಟವಂತೆ

ನಿಮಗೆ ‘ಪರಿಣೀತಾ’ ಫಿಲಂ ನೆನಪಿದ್ಯಾ? ಭಾವುಕ ನೆಲೆಯಲ್ಲಿ ತೇಲಿ ಹೋಗುವ ಪ್ರೇಮಕತೆ, ವಿದ್ಯಾ ಸದಾ ನೆನಪಿನಲ್ಲಿ ಉಳಿಯುವ ಮಧುರ ಹಾಡುಗಳು, ಹಸಿಬಿಸಿ ದೃಶ್ಯಗಳು ಇತ್ಯಾದಿ ಇತ್ಯಾದಿ… 2005ರಲ್ಲಿ ತೆರೆಕಂಡ ಈ ಚಿತ್ರ ವಿದ್ಯಾ ಬಾಲನ್‌ರ ಅಭಿನಯ ಸಾಮರ್ಥ್ಯವನ್ನು ದೇಶಕ್ಕೆ ಸಾರಿ ಹೇಳಿತು. ಮಾತ್ರವಲ್ಲ, ಆಕೆಗೆ ಬಂಗಾಲಿಗಳ ಜೊತೆಗೆ ಶಾಶ್ವತ ನಂಟನ್ನೂ ಬೆಸೆದುಕೊಟ್ಟಿತು.

ಇದಾದ ನಂತರ ವಿದ್ಯಾ ಅಭಿನಯದ ಹಲವು ಸಿನಿಮಾಗಳ ಚಿತ್ರೀಕರಣ ಕೊಲ್ಕತ್ತಾದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಗಾಲಿ ಕಲಿಯಲು ಆರಂಭಿಸಿದ ನಟಿಗೆ ಆ ಭಾಷೆಯ ಮೇಲೆ ಒಂದು ಮಟ್ಟದ ಪ್ರಭುತ್ವವೂ ಸಿಕ್ಕಿದೆ. ಅವರು ಇದೀಗ ಬಂಗಾಲಿ ಜಾಹೀರಾತುಗಳಿಗೆ ತಮ್ಮದೇ ದನಿಯನ್ನೂ ಕೊಡುತ್ತಿದ್ದಾರೆ.

ಬಂಗಾಲಿ ಸಿನಿ ಜಗತ್ತಿನೊಂದಿಗೆ ನಂಟು ಹೊಂದಿರುವ ವಿದ್ಯಾ, ಶೂಟಿಂಗ್ ವೇಳೆ ನಿರ್ದೇಶಕರೊಂದಿಗೆ ಬಂಗಾಲಿಯಲ್ಲೇ ಸಂವಾದಿಸುತ್ತಾರೆ. ಪಶ್ಚಿಮ ಬಂಗಾಳದಲ್ಲೇ ಹುಟ್ಟಿ ಬೆಳೆದವರಂತೆಯೇ ಸುಲಲಿತವಾಗಿ ಮಾತಾಡುವ ಅವರ ಧಾಟಿ ಕಂಡು ಬಂಗಾಲಿಗಳೇ ಮರುಳಾಗಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry