ಗುರುವಾರ , ಸೆಪ್ಟೆಂಬರ್ 19, 2019
26 °C

ಒಬ್ಬಳು ಮಾತಿನಮಲ್ಲಿ, ಮತ್ತೊಬ್ಬಳು ಮೌನಗೌರಿ

Published:
Updated:
ಒಬ್ಬಳು ಮಾತಿನಮಲ್ಲಿ, ಮತ್ತೊಬ್ಬಳು ಮೌನಗೌರಿ

ಒಬ್ಬಳ ಮಾತಿಗೆ ಫುಲ್‌ಸ್ಟಾಪ್ ಇಲ್ಲವೇ ಇಲ್ಲ, ಇನ್ನೊಬ್ಬಾಕೆ ಮಾತನ್ನೇ ಆಡುವುದಿಲ್ಲ. ದೇಶಾಂತರ ಪ್ರವಾಸ ಹೊರಟ ಈ ಜೋಡಿಯ ಹೆಸರು ಒಂದೇ. ಅದು ಜಿಯಾ. ವಿಮಾನದಲ್ಲಿ ಅಕ್ಕಪಕ್ಕ ಕೂರುವ ಕಾರಣಕ್ಕೆ ಪರಿಚಿತರಾಗುವ ಇವರು ಮುಂದೆ ಒಟ್ಟಿಗೆ ದೇಶ ಸುತ್ತುತ್ತಾರೆ. ಈ ದೇಶ ಸುತ್ತುವಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಸಿನಿಮಾದ ಹೂರಣ ಇರಬಹುದು.

ಕಲ್ಕಿ ಕೊಯ್ಲಿನ್- ರಿಚಾ ಛಡ್ಡಾ ಅಭಿನಯದ ‘ಜಿಯಾ ಔರ್ ಜಿಯಾ’ ಚಿತ್ರದ ಟ್ರೇಲರ್ ನೋಡಿದಾಗ ಹೀಗೆ ಅನಿಸುತ್ತದೆ. ಚಿತ್ರದ ಬಿಡುಗಡೆಯ ದಿನಾಂಕ ಸನಿಹ ಇರುವಾಗ ಅಪ್‌ಲೋಡ್ ಆಗಿರುವ ಈ ಟ್ರೇಲರ್ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟು ಹಾಕುವಲ್ಲಿ ಯಶಸ್ವಿಯಾಗುತ್ತದೆ.

ವಾಚಾಳಿ ಪಾತ್ರಕ್ಕೆ ಜೀವ ತುಂಬಿರುವ ಕಲ್ಕಿ, ಪದೇಪದೇ ಆತ್ಮಹತ್ಯೆ ಪ್ರಯತ್ನ ಮಾಡುವ ಅಂತರ್ಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಚಾ ಬಹುಕಾಲ ಮನದಲ್ಲಿ ಉಳಿಯುತ್ತಾರೆ. ಚಿತ್ರದಲ್ಲಿನ ಅವರ ವ್ಯಕ್ತಿತ್ವಗಳು ಹಾಗೇಕೆ ರೂಪುಗೊಂಡವು ಎಂಬ ಪ್ರಶ್ನೆಯನ್ನೂ ನೋಡುವವರ ಮನದಲ್ಲಿ ಹುಟ್ಟುಹಾಕುತ್ತವೆ.

ಹಾವಾರ್ಡ್‌ ರೊಸ್‌ಮೆಯರ್ ನಿರ್ದೇಶನದ ಈ ಚಿತ್ರದ ಮೂಲಕ ಅರ್ಸಾನ್ ಗೋನಿ ಎನ್ನುವ ಹೊಸ ನಟ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.

ವಿಶ್ವ ಪ್ರವಾಸೋದ್ಯಮ ದಿನವಾದ ಸೆ.27ರಂದೇ ಟ್ರೇಲರ್ ಯುಟ್ಯುಬ್‌ಗೆ ಅಪ್‌ಲೋಡ್ ಆಗಿರುವುದು ಕೇವಲ ಕಾಕತಾಳೀಯ ಆಗಿರಲಾರದು.

Post Comments (+)