ಅಪರೂಪದ ನಟಿ ಆಶಾ ಪಾರೇಖ್‌

ಮಂಗಳವಾರ, ಜೂನ್ 18, 2019
23 °C

ಅಪರೂಪದ ನಟಿ ಆಶಾ ಪಾರೇಖ್‌

Published:
Updated:
ಅಪರೂಪದ ನಟಿ ಆಶಾ ಪಾರೇಖ್‌

60 ಮತ್ತು 70ರ ದಶಕದಲ್ಲಿ ಹಿಂದಿ ಸಿನಿಮಾ ಜಗತ್ತಿನಲ್ಲಿ ತಮ್ಮ ಅಭಿನಯದಿಂದಲೇ ಗಮನ ಸೆಳೆದ ನಾಯಕಿ ಆಶಾ ಪಾರೇಖ್ ಅವರ ಜನ್ಮ ದಿನ ಇಂದು (ಜನನ: ಅಕ್ಟೋಬರ್ 2, 1942). ಗುಜರಾತಿನ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಆಶಾ ಮೂಲತಃ ನೃತ್ಯಕಲಾವಿದೆ.

ಕಾರ್ಯಕ್ರಮವೊಂದರಲ್ಲಿ ಆಶಾ ನೃತ್ಯವನ್ನು ನೋಡಿ ಮೆಚ್ಚಿದ ನಿರ್ದೇಶಕ ಬಿಮಲ್ ರಾಯ್ ಆಶಾ ಅವರನ್ನು ಸಿನಿ ಜಗತ್ತಿಗೆ ’ಮಾ’ ಚಿತ್ರದ ಮೂಲಕ ಪರಿಚಯಿಸಿದರು. ಆಶಾ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಅವಿವಾಹಿತರಾಗಿ ಉಳಿದ ಆಶಾ, ‘ದಿ ಹಿಟ್ ಗರ್ಲ್’ ಹೆಸರಿನಲ್ಲಿ ಆತ್ಮಕತೆಯನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ತಮ್ಮ ವೈಯಕ್ತಿಕ ಜೀವಾನುಭವ ಮತ್ತು ಚಿತ್ರರಂಗದ ಮಹತ್ವದ ಘಟನೆಗಳನ್ನು ದಾಖಲಿಸಿದ್ದಾರೆ.

ಜನಪ್ರಿಯ ಚಿತ್ರಗಳು: ಕಟಿ ಪತಂಗ್, ದಿಲ್ ದೇಕೆ ದೇಖೋ, ಹಮ್ ಹಿಂದೂಸ್ತಾನಿ, ಮೇರೇ ಸನಂ, ತೀಸ್ರಿ ಮಂಜಿಲ್, ಲವ್ ಇನ್ ಟೋಕಿಯೋ, ನಯಾ ರಾಸ್ತಾ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry