ವೈದ್ಯರ ಚೀಟಿ ಇಲ್ಲದೆ ಔಷಧಿ: ದೂರು

ಭಾನುವಾರ, ಮೇ 26, 2019
33 °C

ವೈದ್ಯರ ಚೀಟಿ ಇಲ್ಲದೆ ಔಷಧಿ: ದೂರು

Published:
Updated:
ವೈದ್ಯರ ಚೀಟಿ ಇಲ್ಲದೆ ಔಷಧಿ: ದೂರು

ಉಡುಪಿ: ವೈದ್ಯರ ಚೀಟಿ ಇಲ್ಲದೆ ಒತ್ತಡ ನಿರ್ವಹಣೆ ಔಷಧಿವನ್ನು ಮೆಡಿಕಲ್ ಗಳಲ್ಲಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಎಸ್ಪಿ ಡಾ. ಸಂಜೀವ್ ಎಂ ಪಾಟೀಲ್ ಅವರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಶನಿವಾರ ದೂರು ನೀಡಿದರು.

ಸಾಮಾನ್ಯವಾಗಿ ಕೆಲವೊಂದು ಔಷಧಿಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಾಲಯ ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಔಷಧಿಯನ್ನು ನೀಡಿದ ಮೆಡಿಕಲ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮೊಬೈಲ್ ಕರೆಯ ಮೂಲಕ ವಂಚಿಸುತ್ತಿರುವ ಜಾಲದ ವಿರುದ್ಧ ದೂರಿದ ಉಡುಪಿಯ ಸಾರ್ವಜನಿಕರೊಬ್ಬರು, ಅಂಚೆಯ ಮೂಲಕ ಕಳುಹಿಸಿದ ಉಡುಗರೆಯನ್ನು ಸ್ವೀಕರಿಸದಕ್ಕೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ಬೈದಿರುವ ಬಗ್ಗೆ ದೂರಿದರು. ಕರೆ ಮಾಡಿರುವ ಮೊಬೈಲ್ ನಂಬರ್ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಕೊಕ್ಕರ್ಣೆಯ ಸಮೀಪದ ನಾಲ್ಕೂರು ಮೀಟರ್ ಬಡ್ಡಿ ವಸೂಲಿ ಮಾಡುವವರು ಕಿರುಕುಳ ನೀಡುತ್ತಿರುದಾಗಿ ಬಗ್ಗೆ ಸಾರ್ವಜನಿಕರೊಬ್ಬರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಎಸ್ಪಿ ಇಗಾಗಲೇ ಮೀಟರ್ ಬಡ್ಡಿ ಸಂಬಂಧಿಸಿದಂತೆ ಬ್ರಹ್ಮಾವರದ ಮಟ್ಪಾಡಿ ಅನಿಲ್ ಮೇಲೆ ಬ್ರಹ್ಮಾವರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಸಿ ಬಂಧಿಸಿಲಾಗಿದೆ. ನಿಯಮ ಬಾಹಿರವಾಗಿ ಬಡ್ಡಿ ವಸೂಲಿ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಮೀಟರ್ ಬಡ್ಡಿಯಿಂದಾಗಿ ಕಿರುಕುಳ ಅನುಭವಿಸುತ್ತಿರುವ ಜನರು ಸ್ಥಳೀಯ ಠಾಣೆಗೆ ದೂರ ನೀಡ ಬಹುದು ಎಂದು ಹೇಳಿದರು.

ಹೆಬ್ರಿ ನಿವಾಸಿಯೊಬ್ಬರು ಕರೆ ಮಾಡಿ ಮಂದಾರ್ತಿಯಲ್ಲಿ ವೈಟ್ ಬೋರ್ಡ್‌ ವಾಹನಗಳು ಬಾಡಿಗೆ ಮಾಡುತ್ತಿರುವುದರ ಬಗ್ಗೆ ದೂರು ನೀಡಿದರು. ಈ ಬಗ್ಗೆ ಆರ್.ಟಿ.ಓ ಅಧಿಕಾರಿಗಳಿಗೆ ತಿಳಿಸಿ ಕ್ರಮ ತೆಗೆದುಕೊಳ್ಳುದಾಗಿ ಎಸ್‌ಪಿ ಭರವಸೆ ನೀಡಿದರು.

ಮಟ್ಕಾ ಜೂಜಾಟದ ಬಗ್ಗೆ ಕೆಲವು ದೂರುಗಳು ಕೇಳಿ ಬಂದವು. ಬೈಂದೂರು, ನಡೂರು ಹಾಗೂ ಶಿರೂರಿನಲ್ಲಿ ಕೆಲವು ಅಕ್ರಮವಾಗಿ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ದೂರಿದರು. ನಾವುಂದ ಆಂಗ್ಲ ಮಾಧ್ಯಮದ ಬಳಿಯ ರಸ್ತೆಯಲ್ಲಿ ವಾಹನಗಳಿಗೆ ಗ್ರೀಸಿಂಗ್ ಮಾಡಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಗ್ರೀಸ್ ಬಿದ್ದು ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅಪಘಾತವಾಗುವ ಕುರಿತು. ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆಯೂ ಸಾರ್ವಜನಿಕರು ಗಮನ ಸೆಳೆದರು. ಒಟ್ಟು 24 ಕರೆಗಳು ಬಂದವು.

ಕಳೆದ ವಾರದ ನೇರ ಪೋನ್ ಇನ್ ಕಾರ್ಯಕ್ರಮದ ಕರೆಗಳಿಗೆ ಸ್ಪಂದಿಸಿ ಇಗಾಗಲೇ 7 ಮಟ್ಕಾ ಪ್ರಕರಣದಲ್ಲಿ 8 ಮಂದಿ, 2 ಜೂಜಾಟ ಪ್ರಕರಣದಲ್ಲಿ 14 ಮಂದಿ ಹಾಗು 3 ಗಾಂಜಾ ಸೇವನೆ ಪ್ರಕರಣದಡಿಯಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ. ಗಂಜಾ ಸೇವನೆ ಹಾಗು ಮಾರಾಟದ ಬಗ್ಗೆ ಸಾರ್ವಜನಿಕರು ನಿರ್ದಿಷ್ಟ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರ ವಿರುದ್ಧ ಒಟ್ಟು 999 ಪ್ರಕರಣ ದಾಖಲು ಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry