ಉಗ್ರಗಾಮಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳಲಿ

ಬುಧವಾರ, ಜೂನ್ 19, 2019
31 °C

ಉಗ್ರಗಾಮಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳಲಿ

Published:
Updated:
ಉಗ್ರಗಾಮಿಗಳ ಅಟ್ಟಹಾಸಕ್ಕೆ ಕಡಿವಾಣ ಬೀಳಲಿ

ವಿಜಯಪುರ: ದೇಶಕ್ಕೆ ತಲೆನೋವಾದ ಉಗ್ರಗಾಮಿಗಳ ಅಟ್ಟಹಾಸ, ಬಾಂಗ್ಲಾ ವಲಸಿಗಾರರಿಗೆ ಕಡಿವಾಣ ಬೀಳುವುದು ಅತ್ಯವಶ್ಯ ಎಂದು ಆರ್ಎಸ್ಎಸ್‌ನ ಹಿರಿಯ ವಕ್ತಾರ ಗೋವಿಂದಜೀ ಹೇಳಿದರು. ನಗರದಲ್ಲಿ ವಿಜಯ ದಶಮಿ ಅಂಗವಾಗಿ ಆರ್ಎಸ್‌ಎಸ್ ಸ್ವಯಂ ಸೇವಕರಿಂದ ನಡೆದ ಪಥಸಂಚಲನ ಕಾರ್ಯಕ್ರಮದ ನಂತರ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಜಿಹಾದಿ ಉಗ್ರವಾದಿಗಳ ಅಟ್ಟಹಾಸ, ಮಾವೋ ಉಗ್ರರ ಉಪಟಳದಿಂದ ಭಾರತ ದೇಶದ ಸಮಗ್ರತೆ, ಏಕತೆ, ಶಾಂತಿಗೆ ಭಂಗ ಉಂಟಾಗುತ್ತಿದೆ ವಿಷಾಧ ವ್ಯಕ್ತಪಡಿಸಿದರು.

ಇತ್ಉಗ್ರಗಾಮಿಗಳ ಅಟ್ಟಹಾಸ ಜಾಸ್ತಿಯಾಗಿದೆ. ಬಾಂಗ್ಲಾ ವಲಸಿಗರು ದೇಶಕ್ಕೆ ದೊಡ್ಡ ತಲೆನೋವಾಗಿದ್ದಾರೆ.

ಕಾಶ್ಮೀರದಲ್ಲಂತೂ ಸೈನಿಕರ ಮೇಲೆಯೇ ಕಲ್ಲು ಹೊಡೆಯಲಾಗುತ್ತಿದೆ. ಪ್ರಾಣವನ್ನೇ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವ ಸೈನಿಕರ ಮೇಲೆ ಕಲ್ಲು ಹೊಡೆಯುವವರ ಮೇಲೆ ರಬ್ಬರ್ ಗುಂಡು ಸಹ ಹೊಡೆಯಬಾರದು ಎಂದು ಕೆಲವರು ಧ್ವನಿ ಮೊಳಗಿಸುತ್ತಿದ್ದಾರೆ, ಕಲ್ಲು ಹೊಡೆಯುವವರನ್ನು ಸಮರ್ಥಿಸಿಕೊಳ್ಳಲು ಧರ್ಮ, ಮಾನವೀಯತೆಯ ಶಬ್ದವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಧರ್ಮೋ ರಕ್ಷತಿ ರಕ್ಷತ: ಎಂಬ ಪವಿತ್ರ ಸೂಕ್ತಿಯಂತೆ ಧರ್ಮವನ್ನು ರಕ್ಷಿಸಿದವರಿಗೆ ಧರ್ಮ ರಕ್ಷಿಸುತ್ತದೆ. ಅಸುರೀ ಸ್ವಭಾವದವರನ್ನು ಮಟ್ಟ ಹಾಕುವುದು ಧರ್ಮ ರಕ್ಷಣೆಯ ಒಂದು ಭಾಗ. ಭಾರತೀಯರು ವಿಜಯೋಪಾಸಕರು, ಅಂದರೆ ವಿಜಯದ ಆರಾಧಕರು. ವಿಜಯ ದಶಮಿಯ ಪವಿತ್ರ ದಿನದಂದು ವಿಜಯದ ಸಂಕಲ್ಪವನ್ನು ಮಾಡಬೇಕಿದೆ. ವಿಜಯದ ಆರಾಧನೆ ಎಂದರೆ ಅಧರ್ಮದ ವಿರುದ್ಧ ನಡೆಯುವ ಹೋರಾಟದಲ್ಲಿ ತೊಡಗಿಸಿಕೊಳ್ಳುವುದೇ ವಿಜಯೋಪಾಸನೆ ಎಂದರು ತಿಳಿಸಿದರು.

ಡಾ.ಸಂಜೀವ ಪ್ರಭಾಕರ ಪಾಟೀಲ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿ. ಈ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಪಾತ್ರ ಪ್ರಮುಖವಾಗಿದೆ. ಸಾಧನೆಗೆ ಸಂಯಮ ಅತ್ಯಂತ ಅವಶ್ಯ ಎಂದು ಹೇಳಿದರು.

ಪಥಸಂಚಲನ: ವಿಜಯ ದಶಮಿ ಪ್ರಯುಕ್ತ ಆರ್ಎಸ್ಎಸ್ ಸ್ವಯಂ ಸೇವಕರು ಗಣವೇಷದಲ್ಲಿ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದರು. ವಿಧಾನ ಪರಿಷತ್ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ರವಿಕಾಂತ ಬಗಲಿ, ವಿಜಯಕುಮಾರ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ವಿಕಾಸ ಪದಕಿ, ರಾಹುಲ ಜಾಧವ, ಶಿವರುದ್ರ ಬಾಗಲಕೋಟ, ಸಂಕೇತ ಬಗಲಿ, ಪ್ರಕಾಶ ಅಕ್ಕಲಕೋಟ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ಗೋಪಾಲ ಘಟಕಾಂಬಳೆ, ರಾಕೇಶ ಕುಲಕರ್ಣಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry