ಭಾರತದ ಗೆಲುವಿಗೆ 243 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

ಮಂಗಳವಾರ, ಜೂನ್ 18, 2019
23 °C

ಭಾರತದ ಗೆಲುವಿಗೆ 243 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

Published:
Updated:
ಭಾರತದ ಗೆಲುವಿಗೆ 243 ರನ್‌ ಗುರಿ ನೀಡಿದ ಆಸ್ಟ್ರೇಲಿಯಾ

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ನಡೆಯುತ್ತಿರುವ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ತಂಡವು 243 ರನ್‌ ಗೆಲುವಿನ ಗುರಿ ನೀಡಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 242ರನ್‌ ಗಳಿಸಿದೆ. 

ಡೇವಿಡ್‌ ವಾರ್ನರ್‌(53), ಆ್ಯರನ್‌ ಫಿಂಚ್‌ (32) ಉತ್ತಮ ಜತೆಯಾಟದ ನೆರವಿನಿಂದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡ ಬೃಹತ್‌ ಮೊತ್ತ ಪೇರಿಸುವ ಮುನ್ಸೂಚನೆ ನೀಡಿತು. ಆದರೆ, ಅಕ್ಷರ್‌ ಪಟೇಲ್‌ ಸ್ಪೀನ್‌ ದಾಳಿಗೆ ಡೇವಿಡ್‌ ವಾರ್ನರ್‌ ವಿಕೆಟ್‌ ಒಪ್ಪಿಸಿದ್ದರು. ನಂತರ ಕ್ರೀಸ್‌ಗೆ ಬಂದ ಇತರೆ ಆಟಗಾರರು ಹೆಚ್ಚು ಸಮಯ ಆಟವಾಡಲು ವಿಫಲರಾದರು.

ಆಸ್ಟ್ರೇಲಿಯಾ: ಡೇವಿಡ್‌ ವಾರ್ನರ್‌ 53, ಆ್ಯರನ್‌ ಫಿಂಚ್‌ 32,  ಸ್ಟೀವನ್‌ ಸ್ಮಿತ್‌ 16, ಪೀಟರ್‌ ಹ್ಯಾಂಡ್ಸ್‌ಕಂಬ್‌ 13, ಟ್ರಾವಿಸ್‌ ಹೆಡ್‌ 42, ಮಾರ್ಕಸ್‌ ಸ್ಟೊಯಿನಿಸ್‌ 46,  ಮ್ಯಾಥ್ಯೂ ವೇಡ್‌ 20,  ಜೇಮ್ಸ್‌ ಫಾಕ್ನರ್‌ 12, ನೇಥನ್‌ ಕೌಲ್ಟರ್‌ನೈಲ್‌ 00, ಪ್ಯಾಟ್‌ ಕಮಿನ್ಸ್‌ ಬ್ಯಾಟಿಂಗ್‌ 02ರನ್‌ ಗಳಿಸಿದ್ದಾರೆ. 

ಭಾರತದ ಪರ: ಅಕ್ಷರ್‌ ಪಟೇಲ್‌ 3, ಜಸ್‌ಪ್ರೀತ್‌ ಬೂಮ್ರಾ 2, ಭುವನೇಶ್ವರ್‌ ಕುಮಾರ್‌ 1, ಹಾರ್ದಿಕ್‌ ಪಾಂಡ್ಯ 1, ಕೇದಾರ್‌ ಜಾಧವ್‌ 1 ವಿಕೆಟ್‌ ಕಬಳಿಸಿದ್ದಾರೆ.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 3–1ರಲ್ಲಿ ಮುನ್ನಡೆ ಸಾಧಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry