ಮತ್ತೊಮ್ಮೆ ಅವಳಿ ಮಕ್ಕಳ ತಾಯಿಯಾದ ಸೆಲೀನಾ ಜೇಟ್ಲಿ

ಸೋಮವಾರ, ಜೂನ್ 24, 2019
24 °C

ಮತ್ತೊಮ್ಮೆ ಅವಳಿ ಮಕ್ಕಳ ತಾಯಿಯಾದ ಸೆಲೀನಾ ಜೇಟ್ಲಿ

Published:
Updated:
ಮತ್ತೊಮ್ಮೆ ಅವಳಿ ಮಕ್ಕಳ ತಾಯಿಯಾದ ಸೆಲೀನಾ ಜೇಟ್ಲಿ

ದುಬೈ: ಬಾಲಿವುಡ್‌ ನಟಿ ಸೆಲೀನಾ ಜೇಟ್ಲಿ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಾಯಿಯಾಗಿರುವ ಕುರಿತು ಫೇಸ್‌ಬುಕ್‌ ಖಾತೆಯಲ್ಲಿ ಸಿಹಿ ಸಂದೇಶವನ್ನು ಹಂಚಿಕೊಂಡಿದ್ದಾರೆ. ಆದರೆ, ದುರದೃಷ್ಟವಶಾತ್ ಅವಳಿಗಳ ಪೈಕಿ ಒಂದು ಮಗು ಅಸುನೀಗಿದೆ.

ಸದ್ಯ ಸೆಲೀನಾ ಪತಿ ಪೀಟರ್‌ ಹಾಗ್‌ ಅವರೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ. ಸೆಲೀನಾ ಅವರಿಗೆ ಈಗಾಗಲೇ ಅವಳಿ ಮಕ್ಕಳಿದ್ದಾರೆ. ಅವರಿಗೆ ವಿನ್ಸ್‌ಟನ್‌ ಮತ್ತು ವೀರಾಜ್‌ ಎಂಬ ಅವಳಿ ಗಂಡು ಮಕ್ಕಳಿದ್ದು, ಅವರಿಗೆ ಐದು ವರ್ಷ ವಯಸ್ಸು. ಸೆಪ್ಟೆಂಬರ್ 10ರಂದು ಎರಡನೇ ಬಾರಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. 

ನವಜಾತ ಅವಳಿಗಳಿಗೆ ‘ಅರ್ಥರ್‌ ಜೇಟ್ಲಿ ಹಾಗ್‌’ ಮತ್ತು ‘ಶಂಷೇರ್‌ ಜೇಟ್ಲಿ ಹಾಗ್‌’ ಎಂದು ನಾಮಕರಣ ಮಾಡಲಾಗಿತ್ತು. ಆದರೆ ‘ಶಂಷೇರ್‌ ಜೇಟ್ಲಿ ಹಾಗ್‌’ ಹೃದಯ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಸೆಲೀನಾ ನೋವಿನ ಸಂಗತಿಯನ್ನೂ ವಿವರಿಸಿದ್ದಾರೆ.

‘ಎರಡು ತಿಂಗಳ ಹಿಂದಷ್ಟೆ ನನ್ನ ತಂದೆಯನ್ನು ಕಳೆದುಕೊಂಡಿದ್ದೆ. ಇದೀಗ ತಾಯಿಯಾದ ಸಂತಸದಲ್ಲಿದ್ದ ನನಗೆ ಮಗುವಿನ ಸಾವಿನಿಂದ  ಬಹಳ ದುಖಃವಾಗಿದೆ’ ಎಂದು ಸಲೇನಾ ಹೇಳಿದ್ದಾರೆ. ಇವರು 2001ರಲ್ಲಿ ‘ಮಿಸ್ ಇಂಡಿಯಾ’ ಆಗಿ ಆಯ್ಕೆಯಾಗಿದ್ದರು. ಅದೇ ವರ್ಷ ‘ಮಿಸ್‌ ಯುನಿವರ್ಸ್‌’ನಲ್ಲಿ ರನ್ನರ್ ಅಪ್ ಆಗಿದ್ದರು. 2011ರಲ್ಲಿ ದುಬೈ ಮೂಲದ ಪೀಟರ್‌ ಹಾಗ್‌ ಅವರೊಂದಿಗೆ ಮದುವೆಯಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry