ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶದ ಸಮೀಪ ಚೀನಾ ನಿರ್ಮಿಸಿರುವ ಹೆದ್ದಾರಿ ಸಂಚಾರಕ್ಕೆ ಮುಕ್ತ

Last Updated 1 ಅಕ್ಟೋಬರ್ 2017, 14:09 IST
ಅಕ್ಷರ ಗಾತ್ರ

ಬೀಜಿಂಗ್‌: ಅರುಣಾಚಲ ಪ್ರದೇಶದ ಗಡಿ ಭಾಗಕ್ಕೆ ಸಮೀಪದಲ್ಲಿ ಚೀನಾ ನಿರ್ಮಿಸಿರುವ 409 ಕಿ.ಮೀ ಉದ್ದದ ಹೆದ್ದಾರಿಯನ್ನು ಭಾನುವಾರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಟಿಬೆಟ್‌ ಪ್ರಾಂತೀಯ ರಾಜಧಾನಿ ಲಾಸಾವನ್ನು ನ್ಯಿಂಗ್ಚಿ ನಗರದೊಂದಿಗೆ ಸಂಪರ್ಕ ಕಲ್ಪಿಸುವ ಈ ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಅದು ₹38,860 ಕೋಟಿ ವೆಚ್ಚ ಮಾಡಿದೆ.

ಈ ಹೆದ್ದಾರಿಯು ಟಿಬೆಟ್‌ನ ಪ್ರಮುಖ ಪ್ರವಾಸಿ ತಾಣಗಳಾಗಿರುವ ಈ ಎರಡು ನಗರಗಳ ನಡುವಣ ಪ್ರಯಾಣ ಅವಧಿಯನ್ನು ಎಂಟು ಗಂಟೆಗಳಿಂದ ಐದು ಗಂಟೆಗಳಿಗೆ ಇಳಿಸಲಿದೆ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT