ಆಟೊ ಜಾಗೃತಿ

ಸೋಮವಾರ, ಮೇ 27, 2019
28 °C

ಆಟೊ ಜಾಗೃತಿ

Published:
Updated:
ಆಟೊ ಜಾಗೃತಿ

ನಗರದಲ್ಲಿ ಓಡಾಡುತ್ತಿದೆ ಈ ಪರಿಸರ ಸ್ನೇಹಿ 'ಎಸಿ' ಆಟೊ. ಚಾಮರಾಜಪೇಟೆಯಲ್ಲಿ ಕಾಣಿಸಿದ ಈ ಆಟೊದ ಚಿತ್ರಗಳನ್ನು ತೆಗೆದುಕೊಂಡೆ. ಚಾಲಕರನ್ನು ಮಾತನಾಡಿಸೋಣ ಎಂದುಕೊಂಡೆನಾದರೂ ಸಾಧ್ಯವಾಗಲಿಲ್ಲ. ಆಮೇಲ್ ಆಪ್ ಮೂಲಕ ಚೆಕ್ ಮಾಡಿದಾಗ ಇದು ಮಲ್ಲತ್ತಹಳ್ಳಿಯ ವಿ.ನಾರಾಯಣ ಅವರ ಆಟೊ ಎಂದು ತಿಳಿಯಿತು.

ನಗರವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಈ ವಾಹನದ ವೈಶಿಷ್ಟ್ಯ. ಕನ್ನಡ ಭಾಷೆಯ ಬಗ್ಗೆ ಇವರಿಗಿರುವ ಅಭಿಮಾನವೂ ಆಟೊದಲ್ಲಿ ಇವರು ಹಾಕಿರುವ ಫಲಕದ ಮೂಲಕ ವ್ಯಕ್ತವಾಗುತ್ತಿದೆ. ಆಟೊ ಒಳಗೆ ಐದಾರು ಕುಂಡಗಳನ್ನು ಇಟ್ಟಿದ್ದಾರೆ.

ಗಿಡಮರಗಳನ್ನು ಉಳಿಸುವ ಕುರಿತು ಹಾಗೂ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಹಲವು ಬರಹಗಳನ್ನೂ ಬರೆಸಿಕೊಂಡಿದ್ದಾರೆ. ರಿಕ್ಷಾ ಪ್ರಯಾಣಿಕರಿಗಾಗಿ ಒಂದು ಕುಡಿಯುವ ನೀರಿನ ಕ್ಯಾನ್ ಸಹ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry