ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಫ್ರಾನ್ಸ್‌: ರೈಲು ನಿಲ್ದಾಣದಲ್ಲಿ ದಾಳಿ ಇಬ್ಬರ ಸಾವು

Published:
Updated:
ಫ್ರಾನ್ಸ್‌: ರೈಲು ನಿಲ್ದಾಣದಲ್ಲಿ ದಾಳಿ ಇಬ್ಬರ ಸಾವು

ಮಾರ್ಸಿಲ್‌ (ಫ್ರಾನ್ಸ್‌): ಇಲ್ಲಿನ ರೈಲು ನಿಲ್ದಾಣದಲ್ಲಿ ಭಾನುವಾರ ವ್ಯಕ್ತಿಯೊಬ್ಬ ಇಬ್ಬರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಆನಂತರ ಪೊಲೀಸರು ಆತನನ್ನು ಗುಂಡಿಟ್ಟು ಸಾಯಿಸಿದ್ದಾರೆ.

ಚಾಕು ಹೊಂದಿದ್ದ ಈ ವ್ಯಕ್ತಿಯು ದಾಳಿ ಮಾಡುವ ಮೊದಲು ‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

2015ರ ಜನವರಿಯಲ್ಲಿ ‘ಚಾರ್ಲಿ ಹೆಬ್ಡೊ’ ವಾರಪತ್ರಿಕೆ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 12 ಜನರನ್ನು ಕೊಂದು ಹಾಕಿದ ಬಳಿಕ, ಫ್ರಾನ್ಸ್‌ನ ಪ್ರಮುಖ ಸ್ಥಳಗಳಲ್ಲಿ ಭಾರಿ ಭದ್ರತೆ ಕಲ್ಪಿಸಿರುವುದರ ನಡುವೆಯೂ ಈ ಘಟನೆ ನಡೆದಿದೆ.

Post Comments (+)