ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಭಾರತ ಬೌದ್ಧ ಸಂಪ್ರದಾಯದಂತೆ ವಿವಾಹ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಉಡುಪಿ: ಪ್ರಾಚೀನ ಭಾರತದ ಬೌದ್ಧ ಸಂಪ್ರಾದಾಯದಂತೆ ಸಮಾಜ ಪರಿವರ್ತನಾ ಚಳವಳಿಯ ಮುಖಂಡ ವಿ. ಮಂಜುನಾಥ್ ಮತ್ತು ಎಸ್. ಅಂಬಿಕಾ ಅವರು ವಿವಾಹ ಜೀವನಕ್ಕೆ ಕಾಲಿಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾದ ಧಮ್ಮಚಾರಿ ಎಸ್. ಆರ್. ಲಕ್ಷ್ಮಣ್ ಅವರ ಪೌರೋಹಿತ್ಯದಲ್ಲಿ ಭಾನುವಾರ ಉಡುಪಿ ಕಿದಿಯೂರು ಹೋಟಲ್‌ನ ಶೇಷಶಯನ ಸಭಾಂಗಣದಲ್ಲಿ ನಡೆದ ವಿವಾಹ ಮಹೋತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು.

ವಿ.ಮಂಜುನಾಥ ಉಡುಪಿ ಕೆಳಾರ್ಕಳಬೆಟ್ಟು ವಿಷ್ಣು ಮೂರ್ತಿ ನಗರದ ವಾಸು ಮೇಸ್ತ್ರಿ ಹಾಗೂ ಸುಶೀಲಾ ದಂಪತಿ ಪುತ್ರ. ವಕೀಲರಾಗಿರುವ ಇವರು ದಲಿತ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಬೌದ್ಧ ಧರ್ಮದ ತತ್ವಗಳಿಂದ ಪ್ರೇರಿತರಾಗಿ 2015ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂ ಕಿನ ಸುರೇಶ ಮತ್ತು ಪಾರ್ವತಿ ದಂಪತಿಯ ಪುತ್ರಿ ಅಂಬಿಕಾ ಮತ್ತು ವಿ. ಮಂಜುನಾಥ ಕುಟುಂಬದವರು ಧಮ್ಮಚಾರಿ ಎಸ್. ಆರ್. ಲಕ್ಷ್ಮಣ್ ಅವರಿಂದ ಬೌದ್ಧ ದೀಕ್ಷೆ ಪಡೆದರು.  ಬೌದ್ಧ ಧರ್ಮದ ಸಂಪ್ರಾದಾಯದಂತೆ ಧಮ್ಮಚಕ್ರ ಹೊಂದಿರುವ ಚಿನ್ನದ ಕರಿಮಣಿಯನ್ನು ಕಟ್ಟಿ, ಹಾರವನ್ನು ಬದಲಾಯಿಸಿಕೊಂಡು ಬೌದ್ಧ ಧರ್ಮದ ಪದ್ಧತಿ ಅನುಸಾರ ಸತಿಪತಿಗಳಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT