ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸುರಕ್ಷತಾ ಮಾರ್ಗದರ್ಶಿಗೆ ಸಮಿತಿ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: 37 ವರ್ಷಗಳ ಹಳೆಯ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿರುವ ಸಿಬಿಐಗೆ ಇಲ್ಲಿನ ವಿಶೇಷ ಸಿವಿಲ್‌ ನ್ಯಾಯಾಲಯ ಚಾಟಿ ಬೀಸಿದೆ.

1981ರಲ್ಲಿ ಅಲಹಾಬಾದ್‌ನಲ್ಲಿರುವ ತಕಶೇಕೆಶ್ವರ್‌ ಮಹದೇವ್‌ ದೇವಾಲಯದಿಂದ ಪ್ರಾಚೀನ ಕಾಲದ ಮೂರ್ತಿಯೊಂದರ ಕಳ್ಳತನ ಹಾಗೂ ಅದನ್ನು ನ್ಯೂಯಾರ್ಕ್‌ಗೆ ಸಾಗಿಸಿದ ಪ್ರಕರಣದ ವಿಚಾರಣೆ ವೇಳೆ, ವಿಶೇಷ ನ್ಯಾಯಾಧೀಶ ಸಂಜಯ್‌ ಕುಮಾರ್‌ ಅಗರ್‌ವಾಲ್‌ ಅವರು ಸಿಬಿಐನ ವಿಳಂಬ ನೀತಿಗೆ ಆಶ್ಚರ್ಯ ವ್ಯಕ್ತಪಡಿಸಿದರು. ಈ ಪ್ರಕರಣದ ವಿಚಾರಣೆ ಕೊನೆಯ ಹಂತದಲ್ಲಿದೆ.

‘ದುಬೈನಲ್ಲಿರುವ ಕಾರ್ಮಿಕರ ರಕ್ಷಿಸಿ’

ಜೈಪುರ (ಪಿಟಿಐ): ದುಬೈನಲ್ಲಿ ಸಿಕ್ಕಿಹಾಕಿಕೊಂಡಿರುವ 26 ಜನರ ನೆರವಿಗೆ ಧಾವಿಸುವಂತೆ ಅವರ ಕುಟುಂಬದ ಸದಸ್ಯರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ರಾಜಸ್ಥಾನದ ಕರೌಲಿ,  ಸವಾಯ್‌ ಮಾದೋಪುರ್‌, ದೌಸಾ ಮತ್ತು ಭರತ್‌ಪುರ್‌ ಜಿಲ್ಲೆಯ ಕಾರ್ಮಿಕರು ಕಳೆದ 3–4 ವರ್ಷಗಳಿಂದ ದುಬೈನ ಎರಡು ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರಿಗೆ ನಿರ್ಮಾಣ ಕಂಪೆನಿಯವರು ತೊಂದರೆ ನೀಡುತ್ತಿದ್ದಾರೆ ಎಂದು ಕರೌಲಿ ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಶಾಲಾ ಸುರಕ್ಷಾ ಮಾರ್ಗದರ್ಶಿಗೆ ಸಮಿತಿ

ನವದೆಹಲಿ: ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸುವ ಸಲುವಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ)  ಸಮಿತಿಯೊಂದನ್ನು ರಚಿಸಿದೆ.

‘ವಿವರಣಾತ್ಮಕ ಮಾರ್ಗಸೂಚಿಯನ್ನು ಸಮಿತಿಯು ರಚಿಸಲಿದೆ’ ಎಂದು ಸಿಬಿಎಸ್‌ಇ ಉಪ ಕಾರ್ಯದರ್ಶಿ ಜೈಪ್ರಕಾಶ್ ಚತುರ್ವೇದಿ ತಮ್ಮ ಅಧೀನ
ದಲ್ಲಿನ ಶಾಲೆಗಳಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT