ಭಾನುವಾರ, ಸೆಪ್ಟೆಂಬರ್ 22, 2019
23 °C

ಶೆಂಜೆನ್ ಓಪನ್ ಟೆನಿಸ್ ಟೂರ್ನಿ: ಡೇವಿಡ್ ಗೊಫಿನ್‌ಗೆ ಪ್ರಶಸ್ತಿ

Published:
Updated:
ಶೆಂಜೆನ್ ಓಪನ್ ಟೆನಿಸ್ ಟೂರ್ನಿ: ಡೇವಿಡ್ ಗೊಫಿನ್‌ಗೆ ಪ್ರಶಸ್ತಿ

ಗ್ರೇಸೊನೆಟ್‌: ಬೆಲ್ಜಿಯಂ ಆಟಗಾರ ಡೇವಿಡ್ ಗೊಫಿನ್ ಶೆಂಜೆನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಗೊಫಿನ್ 6–4, 6–7, 6–3ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್‌ ಡೊಪೊಲೊವ್‌ ಅವರನ್ನು ಮಣಿಸಿದರು.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಸೆಟ್‌ನಲ್ಲಿ ಗೊಫಿನ್ ಸೋಲು ಕಂಡರು. ಆದರೆ ಉಳಿದ ಎರಡು ಸೆಟ್‌ಗಳನ್ನು ಅವರು ಸುಲಭದಲ್ಲಿ ಗೆದ್ದುಕೊಂಡರು. ಮೊದಲ ಸೆಟ್‌ನಲ್ಲಿ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದ ಡೊಪೊಲೊವ್‌ ಬಳಿಕ ಎದುರಾಳಿಯ ನಿಖರ ಆಟದ ಮುಂದೆ ಹಿಂದೆ ಉಳಿದರು. ಮೂರನೇ ಸೆಟ್‌ನಲ್ಲಿ ಕೂಡ ಈ ಆಟಗಾರ ಆಯಾಸಗೊಂಡಂತೆ ಆಡಿದರು.

ಗೊಫಿನ್ ತಮ್ಮ ನಿಖರ ಸ್ಮ್ಯಾಷ್‌ ಹಾಗೂ ಬ್ಯಾಕ್‌ಹ್ಯಾಂಡ್ ಹೊಡೆತಗಳಿಂದ ಗಮನಸೆಳೆದರು. ಉಕ್ರೇನ್‌ನ ಆಟಗಾರನ ಮೇಲೆ ಒತ್ತಡ ಹೇರುವ ಮೂಲಕ ಜಯದ ಕದ ತಟ್ಟಿದರು.

Post Comments (+)