ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌; ಪಾಕಿಸ್ತಾನ ತಂಡಕ್ಕೆ ಮುನ್ನಡೆ

Last Updated 1 ಅಕ್ಟೋಬರ್ 2017, 19:42 IST
ಅಕ್ಷರ ಗಾತ್ರ

ಅಬುಧಾಬಿ: ಹ್ಯಾರಿಸ್‌ ಸೋಹೈಲ್‌ (76; 161ಎ, 7ಬೌಂ, 2ಸಿ) ಅವರ ಜಬಾವ್ದಾರಿಯುತ ಬ್ಯಾಟಿಂಗ್‌ನಿಂದಾಗಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿದೆ.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ 4 ವಿಕೆಟ್‌ಗೆ 266ರನ್‌ಗಳಿಂದ ನಾಲ್ಕನೇ ದಿನವಾದ ಭಾನುವಾರ ಆಟ ಮುಂದುವರಿಸಿದ ಸರ್ಫರಾಜ್‌ ಅಹ್ಮದ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 162.3 ಓವರ್‌ಗಳಲ್ಲಿ 422ರನ್‌ ಗಳಿಸಿ ಆಲೌಟ್‌ ಆಯಿತು.

3 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಸಿಂಹಳೀಯ ನಾಡಿನ ತಂಡ ದಿನದಾಟದ ಅಂತ್ಯಕ್ಕೆ 40 ಓವರ್‌ಗಳಲ್ಲಿ 4 ವಿಕೆಟ್‌ಗೆ 69ರನ್‌ ಗಳಿಸಿದೆ. ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ ತಂಡ ಅಜರ್‌ ಅಲಿ ವಿಕೆಟ್‌ ಬೇಗನೆ ಕಳೆದುಕೊಂಡಿತು. ಶನಿವಾರದ ಅಂತ್ಯಕ್ಕೆ 74 ರನ್‌ ಗಳಿಸಿದ್ದ ಅಜರ್‌ ಈ ಮೊತ್ತಕ್ಕೆ 11ರನ್‌ ಸೇರಿಸಿ ರಂಗನಾ ಹೆರಾತ್‌ಗೆ ವಿಕೆಟ್‌ ನೀಡಿದರು.

ಇದರ ಬೆನ್ನಲ್ಲೇ ಸರ್ಫರಾಜ್‌ (18), ಮಹಮ್ಮದ್‌ ಅಮೀರ್ (4) ಮತ್ತು ಯಾಶಿರ್‌ ಶಾ (8) ನಿರ್ಗಮಿಸಿದ್ದರಿಂದ ತಂಡ ಹಿನ್ನಡೆಯ ಭೀತಿ ಎದುರಿಸಿತ್ತು. ಆದರೆ ಹ್ಯಾರಿಸ್‌ ಮಿಂಚಿನ ಆಟ ಆಡಿದರು. ಅವರು ಹಸನ್‌ ಅಲಿ (29; 25ಎ, 2ಬೌಂ, 3ಸಿ) ಜೊತೆ 50 ಮತ್ತು ಮಹಮ್ಮದ್‌ ಅಬ್ಬಾಸ್‌ ಜೊತೆ 32ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಲಂಕಾ ತಂಡ ಆರಂಭಿಕ ಸಂಕಷ್ಟ ಎದುರಿಸಿದೆ. ದಿಮುತ್‌ ಕರುಣಾರತ್ನೆ (10), ಕೌಶಲ್‌ ಸಿಲ್ವ (25), ಲಾಹಿರು ತಿರಿಮಾನ್ನೆ (7) ಮತ್ತು ದಿನೇಶ್‌ ಚಾಂಡಿಮಲ್‌ (7) ಬೇಗನೆ ವಿಕೆಟ್‌ ಒಪ್ಪಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: ಮೊದಲ ಇನಿಂಗ್ಸ್‌: 154.5 ಓವರ್‌ಗಳಲ್ಲಿ 419 ಮತ್ತು 40 ಓವರ್‌ಗಳಲ್ಲಿ 4 ವಿಕೆಟ್‌ಗೆ 69 (ದಿಮುತ್‌ ಕರುಣಾರತ್ನೆ 10, ಕೌಶಲ್‌ ಸಿಲ್ವ 25, ಕುಶಾಲ್‌ ಮೆಂಡಿಸ್‌ ಬ್ಯಾಟಿಂಗ್‌ 16; ಯಾಶಿರ್‌ ಶಾ 25ಕ್ಕೆ2, ಅಸಾದ್‌ ಶಫಿಕ್‌ 7ಕ್ಕೆ1, ಹ್ಯಾರಿಸ್‌ ಸೋಹೈಲ್‌ 7ಕ್ಕೆ1).

ಪಾಕಿಸ್ತಾನ: ಪ್ರಥಮ ಇನಿಂಗ್ಸ್‌: 162.3 ಓವರ್‌ಗಳಲ್ಲಿ 422 (ಅಜರ್‌ ಅಲಿ 85, ಅಸಾದ್‌ ಶಫಿಕ್‌ 39, ಬಾಬರ್‌ ಆಜಮ್‌ 28, ಹ್ಯಾರಿಸ್‌ ಸೋಹೈಲ್‌ 76, ಸರ್ಫರಾಜ್‌ ಅಹ್ಮದ್‌ 18, ಹಸನ್‌ ಅಲಿ 29; ಸುರಂಗ ಲಕ್ಮಲ್‌ 42ಕ್ಕೆ2, ನುವಾನ್‌ ಪ್ರದೀಪ 77ಕ್ಕೆ2, ರಂಗನಾ ಹೆರಾತ್‌ 93ಕ್ಕೆ5, ದಿಲ್ರುವಾನ ಪೆರೇರಾ 92ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT