ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯ ಬಿರುಕು ಪತ್ತೆ ಮಾಡುವ ಸಾಧನ ಅಭಿವೃದ್ಧಿ

Last Updated 1 ಅಕ್ಟೋಬರ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ರೈಲು ಹಳಿಗಳಲ್ಲಿ ಬಿರುಕು ಬಿಟ್ಟಿರುವುದನ್ನು ಪತ್ತೆ ಮಾಡುವ ಸಾಧನವನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳಾದ ಶಶಾಂಕ್‌ ಶಂಕರ್‌, ದಿಲೀಪ್‌ ಸಾಯಿವಿ, ಅರ್ಜುನ್‌ ಕಿಣಿ, ವಿ.ಅಖಿಲ್‌ ಹಾಗೂ ಶ್ರೇಯಸ್‌ ದತ್ತ ಶಿವರಾಮ ಅವರು ಪ್ರಾಧ್ಯಾಪಕ ರಘುನಂದನ್‌ ಮಾರ್ಗದರ್ಶನದಲ್ಲಿ ಈ ಸಾಧನವನ್ನು ಕಂಡುಹಿಡಿದಿದ್ದಾರೆ.

ನ್ಯಾಸ್ಕಾಂ ಹಾಗೂ ಬಾಯನ್ಸಿ ಕಂಪೆನಿಗಳ ಆಶ್ರಯದಲ್ಲಿ ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ತಂತ್ರಜ್ಞಾನ ಕ್ಷೇತ್ರದ ರಾಷ್ಟ್ರೀಯ ಸಂಶೋಧನಾ ಸ್ಪರ್ಧೆ’ಯಲ್ಲಿ ಈ ಸಾಧನವನ್ನು ಪ್ರದರ್ಶಿಸಿದ್ದು, ದ್ವಿತೀಯ ಬಹುಮಾನ ಲಭಿಸಿದೆ.

‘ರೈಲಿನ ಕೆಳಭಾಗದಲ್ಲಿ ಈ ಸಾಧನವನ್ನು ಅಳವಡಿಸಬಹುದು. ಇದು ಹಳಿಗಳ ಲೋಪಗಳನ್ನು ವೈಜ್ಞಾನಿಕವಾಗಿ ಪತ್ತೆ ಮಾಡಿ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತದೆ. ಇದರಿಂದ ಅದೇ ಹಾದಿಯಲ್ಲಿ ಸಂಚರಿಸುವ ಮತ್ತೊಂದು ರೈಲನ್ನು ನಿಲ್ಲಿಸಿ, ಹಳಿಯನ್ನು ದುರಸ್ತಿ ಕಾರ್ಯ ಕೈಗೊಳ್ಳಬಹುದು’ ಎಂದು ವಿದ್ಯಾರ್ಥಿ ಶಶಾಂಕ್‌ ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT