ದೀಪ ಬೆಳಗಿಸಲಿದೆ ಅಡುಗೆ ತ್ಯಾಜ್ಯ!

ಮಂಗಳವಾರ, ಜೂನ್ 18, 2019
26 °C

ದೀಪ ಬೆಳಗಿಸಲಿದೆ ಅಡುಗೆ ತ್ಯಾಜ್ಯ!

Published:
Updated:
ದೀಪ ಬೆಳಗಿಸಲಿದೆ ಅಡುಗೆ ತ್ಯಾಜ್ಯ!

ಬಾಗಲಕೋಟೆ: ಕಸವನ್ನು ರಸವಾಗಿಸುವ ಆಶಯ ಮೂರ್ತ ರೂಪಕ್ಕೆ ತರಲು ಮುಂದಾಗಿರುವ ಇಲ್ಲಿನ ನಗರಸಭೆ ಆಡಳಿತ, ನಗರದಲ್ಲಿ ಸಂಗ್ರಹವಾಗುವ ಹಸಿ ಕಸವನ್ನು ಬಳಕೆ ಮಾಡಿ ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ.

ನಗರಸಭೆ ವ್ಯಾಪ್ತಿಯ 31ವಾರ್ಡ್‌ ಗಳಲ್ಲಿ ಪ್ರತಿನಿತ್ಯ 48 ಟನ್‌ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ 30 ಟನ್‌ ಹಸಿ ಕಸ ಇರಲಿದೆ. ಸದ್ಯ ಅದರಲ್ಲಿ ಎರಡು ಟನ್ ಹಸಿ ಕಸವನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಅದನ್ನು ಸುಟ್ಟು ಮಿಥೇನ್ ಆಗಿ ಪರಿವರ್ತಿಸಿ ವಿದ್ಯುತ್ ಆಗಿ ರೂಪಾಂತರಿಸುವ ತಾಂತ್ರಿಕ ಕಾರ್ಯವನ್ನು ₹ 47.5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಪುಣೆ ಮೂಲದ ಕಂಪೆನಿ ಇದಕ್ಕೆ ತಾಂತ್ರಿಕತೆ ಒದಗಿಸುತ್ತಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ರಾಮನಗರ ನಗರಸಭೆ ಬಿಟ್ಟರೆ ಬಾಗಲಕೋಟೆಯಲ್ಲಿ ಈ ಪ್ರಯತ್ನ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳುತ್ತಿದೆ.

‘ಉದ್ದೇಶಿತ ಘಟಕದಲ್ಲಿ ನಿತ್ಯ ಐದು ಟನ್ ಹಸಿ ಕಸ ಸುಡಬಹುದು. ಈಗ ಎರಟು ಟನ್‌ ಕಸದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ 30 ಬೀದಿ ದೀಪಗಳಿಗೆ ಪ್ರತಿನಿತ್ಯ 12 ತಾಸು ಸತತವಾಗಿ ವಿದ್ಯುತ್ ಪೂರೈಸಬಹುದಾಗಿದೆ’ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ.

ಹಳೆ ಬಾಗಲಕೋಟೆಯಲ್ಲಿರುವ ನಗರಸಭೆ ಘನತ್ಯಾಜ್ಯ ನಿರ್ವಹಣೆ ಘಟಕದ ಪಕ್ಕದಲ್ಲಿಯೇ ಇರುವ ಕುಷ್ಠ ರೋಗಿಗಳ ಕಾಲೊನಿ ಹಾಗೂ ಪಕ್ಕದ ರಸ್ತೆಯ ಬೀದಿ ದೀಪಗಳಿಗೆ ವಿದ್ಯುತ್ ಪೂರೈಸಲು ನಗರಸಭೆ ಮುಂದಾಗಿದೆ.

ಒಲೆ ಉರಿಸಲು ಸಾಧ್ಯವಿದೆ: ‘ಹಸಿ ಕಸವನ್ನು ಸುಟ್ಟು ವಿದ್ಯುತ್ ಆಗಿ ಪರಿವರ್ತಿಸುವ ಜೊತೆಗೆ ಒಲೆ ಉರಿಸಲು ಇಂಧನ ಕೂಡ ಲಭ್ಯವಾಗಲಿದೆ. ತಮಿಳುನಾಡಿನಲ್ಲಿ ಸಾರ್ವಜನಿಕ ಶೌಚಾಲಯದ ಮಲವನ್ನು ಸ್ಲರಿ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಅದನ್ನು ಇಂಧನವಾಗಿ ಪರಿವರ್ತಿಸಿ ಸ್ಥಳೀಯ ಸ್ಲಂ ನಿವಾಸಿಗಳಿಗೆ ಉರುವಲಾಗಿ ಪೂರೈಕೆ ಮಾಡಲಾಗುತ್ತಿದೆ.

ಅದೇ ಮಾದರಿಯಲ್ಲಿ ಹಸಿ ಕಸವನ್ನು ಬಳಸಿ ಇಂಧನ ಉತ್ಪಾದಿಸಿ ಇಲ್ಲಿಯೂ ಬಳಕೆ ಮಾಡಲು ಸಾಧ್ಯವಿದೆ. ಅದರ ಬಳಕೆಗೆ ಘನತ್ಯಾಜ್ಯ ವಿಲೇವಾರಿ ಘಟಕದ ಸಮೀಪವೇ ಸಾಮೂಹಿಕ ಅಡುಗೆ ಮನೆ ನಿರ್ಮಿಸಿ ಅಲ್ಲಿನ ಒಲೆಗಳನ್ನು ಸಾರ್ವಜನಿಕರಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಹುದು. ಈ ಬಗ್ಗೆ ಸಂಬಂಧಿಸಿದ ಕಂಪೆನಿಯೊಂದಿಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ’ ಕಲಾದಗಿ ಹೇಳುತ್ತಾರೆ.

ಒಂದೂವರೆ ತಿಂಗಳಲ್ಲಿ ಕಾರ್ಯಾರಂಭ: ಮಿನಿ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೆಗೆ ಈಗಾಗಲೇ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದೆ. ಯಂತ್ರೋಪಕರಣ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಒಂದೂವರೆ ತಿಂಗಳಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ. ಅಡುಗೆ ತ್ಯಾಜ್ಯ, ಕೊಳೆತ ಹಣ್ಣು–ಹಂಪಲು, ಕಾಯಿಪಲ್ಲೆ, ಮಾಂಸವನ್ನು ಒಳಗೊಂಡ ಹಸಿ ಕಸವನ್ನು ಬೇರ್ಪಡಿಸಿ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡುವಂತೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry