ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಪಾಟೀಲ, ಹೊರಟ್ಟಿ ಕ್ಷಮೆ ಕೇಳಲಿ’

Published:
Updated:

ಮುಂಡರಗಿ: ‘ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಬೆಂಬಲಿಸದ ಮಠಾಧೀಶರು ತಮ್ಮ ಮಠಗಳನ್ನು ಖಾಲಿ ಮಾಡಬೇಕು ಎಂದು ಸಚಿವ ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ ಹೇಳಿಕೆ ನೀಡಿ ಉದ್ಧಟತನ ಪ್ರದರ್ಶಿಸಿದ್ದಾರೆ. ಅವರು ಮಠಾಧೀ ಶರ ಕ್ಷಮೆ ಕೇಳಬೇಕು’ ಎಂದು ಅಂತರರಾಷ್ಟ್ರೀಯ ವೀರಶೈವ ಫೌಂಡೇಷನ್ ಸದಸ್ಯ ವೀರಭದ್ರಯ್ಯ ಹಿರೇಮಠ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಮಠ ಮಾನ್ಯಗಳು ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರಿಂದ ನಿರ್ಮಾಣಗೊಂಡಿದ್ದು, ಅವು-ಗಳನ್ನು ಬಿಟ್ಟು ಹೋಗಿ- ಎಂದು ಹೇಳುವುದು ಸರಿಯಲ್ಲ’ ಎಂದರು.

‘ಮಠಗಳನ್ನು ಕಟ್ಟುವಲ್ಲಿ ಹಾಗೂ ಅವುಗಳನ್ನು ಬೆಳೆಸುವಲ್ಲಿ ಕೇವಲ ವೀರಶೈವರು, ಲಿಂಗಾಯತರು ಶ್ರಮಿಸಿಲ್ಲ. ಮಠಗಳ ಬೆಳವ ಣಿಗೆಗೆ ಎಲ್ಲ ವರ್ಗದ ಜನರ ನೆರವು ದೊರೆತಿದೆ. ಜಾತ್ಯಾತೀತರು ಎನಿಸಿಕೊಂಡಿರುವ ಪಾಟೀಲ, ಹೊರಟ್ಟಿ ಅವರು ಒಂದೇ ಜಾತಿಗೆ ಸೀಮಿತವಾಗಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಲಿಂಗಾಯತ ಧರ್ಮಕ್ಕಿಂತ ವೀರಶೈವ ತುಂಬಾ ಪುರಾತನವಾ ದದ್ದು ಎಂದು ಹೇಳಲು ಹಲವಾರು ಐತಿಹಾಸಿಕ ದಾಖಲೆಗಳಿವೆ. ಕೆಲವು ಮಠಾಧೀಶರು, ರಾಜಕಾರಣಿಗಳು ಬಸವಣ್ಣ ಸೇರಿ ಹಲವು ಶರಣರನ್ನು ಮುಂದಿಟ್ಟುಕೊಂಡು ವೀರಶೈವ ಹಾಗೂ ಲಿಂಗಾಯತದಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಶರಣರು ಅನು ಭವ ಮಂಟಪವನ್ನು ಕಟ್ಟಿದ್ದಾರೆ. ಆದರೆ, ಯಾವ ಮಠಗಳನ್ನು ಕಟ್ಟ ಲಿಲ್ಲ’ ಎಂದರು.

Post Comments (+)