ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

Last Updated 2 ಅಕ್ಟೋಬರ್ 2017, 6:54 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರದಲ್ಲಿ ಭಾನುವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಮಳೆಯಾಗಿದೆ. ಸತತ ನಾಲ್ಕು ದಿನಗಳಿಂದ ಭರ್ಜರಿ ಮಳೆಯಾಗುತ್ತದೆ. ಜವಳಗಲ್ಲಿ, ಎಸ್.ಎಂ.ಕೃಷ್ಣ ನಗರ, ಪಂಚಾಕ್ಷರಿ ನಗರ, ರಾಜೀವ ಗಾಂಧಿ ನಗರದಲ್ಲಿರುವ ಚರಂಡಿಗಳು ಉಕ್ಕಿ ಹರಿದಿವೆ.

ವಿದ್ಯುತ್‌ ಸ್ಪರ್ಶಿಸಿ ಯುವಕ ಸಾವು: ಗದುಗಿನ ಹಾತಲಗೇರಿ ನಾಕಾದ ವಾಣಿಜ್ಯ ಸಂಕಿರ್ಣದ ನೆಲಮಹಡಿಯಲ್ಲಿ ಸಂಗ್ರಹವಾಗಿದ್ದ ನೀರು ಹೊರಹಾಕಲು ಮೋಟರ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಗೌತಮ ಪ್ರಭಾಕರ ರೆಡ್ಡಿ (27) ಎಂಬುವರು ಶನಿವಾರ ಮೃತಪಟ್ಟಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಲಕ್ಷ್ಮೇಶ್ವರ: ಒಂದು ವಾರದಿಂದ ಪಟ್ಟಣದಲ್ಲಿ ಸುಮಾರು 104 ಮಿ.ಮೀ ಮಳೆ ಆಗಿದೆ. ಬರಗಾಲದ ಬವಣೆಯಿಂದ ಬಸವಳಿ ದಿದ್ದ ರೈತರಲ್ಲಿ ಮುಖದಲ್ಲಿ ಹರ್ಷ ಮೂಡಿದೆ. ಲಕ್ಷ್ಮೇಶ್ವರ ತಾಲ್ಲೂಕಿನ 14 ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ.

ತುಂಬಿ ಹರಿದ ಹಳ್ಳ ಮತ್ತು ಚೆಕ್‌ ಡ್ಯಾಂ: ಸತತ ಒಂದು ವಾರದಿಂದ ಸುರಿದ ಮಳೆಗೆ ಮಾಗಡಿ ಕೆರೆ ಸಂಪೂರ್ಣ ಭರ್ತಿಯಾಗಿದೆ. ಮಾಗಡಿ ಹಳ್ಳಕ್ಕೆ ನಿರ್ಮಿಸಲಾಗಿದ್ದ ಎಲ್ಲ 14 ಚೆಕ್‌ ಡ್ಯಾಂಗಳು ತುಂಬಿವೆ. ಬಟ್ಟೂರು ಗ್ರಾಮದ ಹತ್ತಿರ ಚೆಕ್‌ ಡ್ಯಾಂಗೆ ಅಡ್ಡಲಾಗಿ ಹಾಕಿದ್ದ ಮಣ್ಣಿನ ಒಡ್ಡು ಒಡೆದು ನೀರು ಪೋಲಾಗಿದೆ.

ಮನೆ ಕುಸಿತ: ಲಕ್ಷ್ಮೇಶ್ವರದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಶೇಕಪ್ಪ ಗೊಜಗೊಜಿ ಎಂಬುವರ ಮನೆ ಕುಸಿದು ಬಿದ್ದ ಪರಿಣಾಮ ಎತ್ತು ತೀವ್ರವಾಗಿ ಗಾಯಗೊಂಡಿದೆ.

ಮನೆಗಳಿಗೆ ನುಗ್ಗಿದ ನೀರು: ಪಟ್ಟಣದ ಜನ್ನತ್‌ ನಗರ, ರಂಗಾಚಾರಿ ಪ್ಲಾಟ್‌ ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ದ್ದರಿಂದ ಅಲ್ಲಿನ ನಿವಾಸಿಗಳು ಪರದಾ ಡಿದರು. ಭಾನುವಾರ ಸುರಿದ ಮಳೆಗೆ ಧರ್ಮಾಪುರಿ ಭಾಗದಲ್ಲಿರುವ ಜಮೀ ನಿನ ಬದುವು ಒಡೆದು ಹೋಗಿದೆ. ಸದ್ಯ ಹಿಂಗಾರು ಬಿತ್ತನೆಗೆ ಅನುಕೂಲ ಆಗಿದ್ದು, ಈಗಾಗಲೆ ರೈತರು ಬಿಳಿಜೋಳ, ಕಡಲೆ ಬಿತ್ತನೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT