ಜೈನ ವಿದ್ವಾಂಸರ ಕೊಡುಗೆ ಅಪಾರ

ಭಾನುವಾರ, ಮೇ 26, 2019
32 °C

ಜೈನ ವಿದ್ವಾಂಸರ ಕೊಡುಗೆ ಅಪಾರ

Published:
Updated:
ಜೈನ ವಿದ್ವಾಂಸರ ಕೊಡುಗೆ ಅಪಾರ

ಶ್ರವಣಬೆಳಗೊಳ: ಸಾಹಿತ್ಯ, ಸಂಗೀತ, ಸಂಸ್ಕೃತಿ, ಆಗಮ, ಆಧ್ಯಾತ್ಮ ಕ್ಷೇತ್ರಕ್ಕೆ ಜೈನ ವಿದ್ವಾಂಸರು ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಶ್ರೇಯಾಂಸಕುಮಾರ್‌ ಜೈನ್‌ ಹೇಳಿದರು. ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಳ ಗೊಳದಲ್ಲಿ ಭಾನುವಾರದಿಂದ ಆರಂಭವಾದ 5 ದಿನಗಳ ರಾಷ್ಟ್ರಮಟ್ಟದ ಜೈನ ವಿದ್ವತ್‌ ಸಮ್ಮೇಳನದಲ್ಲಿ ಮಾತನಾಡಿದರು.

ನಿರಂತರ ಪ್ರವಚನ, ಭಾಷಣದ ಜೊತೆಗೆ ಸ್ವಾಧ್ಯಾಯ ಮಾಡುತ್ತಾರೆ. ಜಿನಾಗಮದಲ್ಲಿ ಪ್ರತಿಪಾದಿಸಲ್ಪಟ್ಟ ಸಿದ್ಧಾಂತ ಪಾಲಿಸುತ್ತಾರೆ. ವಾಸ್ತವಿಕವಾಗಿ ಶ್ರದ್ಧೆ, ಜ್ಞಾನ ಉತ್ತಮಚಾರಿತ್ರ್ಯ. ಈ ಅಂಶಗಳು ಜೀವನದಲ್ಲಿ ಅಳವಡಿಸಿ ಕೊಂಡಾಗ ಇತರರಿಗೆ ಪ್ರೇರಣೆ ನೀಡಿ ಅವರ ಜೀವನ ಪರಿವರ್ತನೆ ಆಗುತ್ತದೆ ಎಂದು ಹೇಳಿದರು.

ಉಪದೇಶ ಕೇವಲ ಮನರಂಜನೆ ಗಾಗಿ ಇದ್ದರೆ ಅದರಿಂದ ಆತ್ಮಕಲ್ಯಾಣ ಸಾಧ್ಯವಿಲ್ಲ. ಇನ್ನೊಬ್ಬರ ಕಲ್ಯಾಣವು ಸಾಧ್ಯವಿಲ್ಲದ ಮಾತು. ಹಾಗಾಗಿ ಉಪದೇಶಗಳಲ್ಲಿ ಜ್ಞಾನ ಪ್ರಧಾನವಾಗಿ ರಬೇಕು. ಜೀವನದ ಯಶಸಿಗೆ ಜ್ಞಾನ ಪ್ರಧಾನ ಸೂತ್ರವಾಗಿದೆ ಎಂದರು.

ವಿದ್ವಾಂಸರ ಜೀವನ ಸದಾ ಧರ್ಮದಲ್ಲಿ ತೊಡಗಿರುತ್ತದೆ. ಧರ್ಮದ ಮೂಲಕ ಅಂತರ್‌ ದೃಷ್ಠಿಯ ವಿಕಾಸವಾಗುತ್ತದೆ. ಧರ್ಮದ ಮೂಲಕ ಅಂತರಂಗ ಶುದ್ಧಿಯಾಗುತ್ತದೆ. ಉತ್ತಮ ಚಾರಿತ್ರ್ಯ ನಿರ್ಮಾಣ ಮಾಡುವ, ಸಂಸ್ಕಾರಗಳನ್ನು ರೂಪಿಸುವ ಬಿಂದುವಾಗಿದೆ ಎಂದು ತಿಳಿಸಿದರು.

ಯಾರು ಶಾಸ್ತ್ರಗಳ ಅಧ್ಯಯನದಲ್ಲಿ ತೊಡುಗುತ್ತಾರೋ ಅಂಥವರು ಸಮಾಜದಲ್ಲಿ ಗೌರವಿಸಲ್ಪಡುತ್ತಾರೆ. ಈ ನಿಟ್ಟಿನಲ್ಲಿ ಡಾ.ಎ.ಎನ್‌.ಉಪಾಧ್ಯೆ,

ಡಾ. ಹೀರಾಲಾಲಾ ಜೀ ಜೈನ್‌, ಶ್ರೀಪೂಲ್‌ ಚಂದ್‌ ಶಾಸ್ತ್ರಿ, ಕೈಲಾಶ್‌ ಚಂದ್‌ ಶಾಸ್ತ್ರಿ, ರತನ್‌ ಲಾಲ್‌ ಶಾಸ್ತ್ರಿ, ಪಂಡಿತ್‌ ಉದಯ ಚಂದ್‌ ಜೈನ್‌, ಡಾ.ಕಪೂರ್‌ ಚಂದ್‌ಜೈನ್‌ ಸೇರಿ ಅನೇಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಚೀನ ಪರಂಪರೆಯ ಗುರುಕುಲ ವನ್ನು ಪುನರ್‌ ಪ್ರತಿಷ್ಠಾಪಿಸಬೇಕು. ಈ ಗುರುಕುಲಗಳಲ್ಲಿ ಪ್ರಾಚೀನ ಸಂಸ್ಕೃತಿಯ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡಬೇಕು. ಜೈನಸಿದ್ಧಾಂತದ ಗ್ರಂಥಗಳನ್ನು ಭಾರತೀಯ ಭಾಷೆಗಳಿಗೆ ಅನುವಾದ ಮಾಡಿ ಪ್ರಕಾಶನಗೊಳಿಸಲು ಸಂಸ್ಥೆ ಸ್ಥಾಪಿಸಬೇಕು ಹಾಗೂ ವಿದೇಶಿ ಭಾಷೆಗಳಲ್ಲೂ ಜೈನಗ್ರಂಥ ಅನುವಾದಿಸಿ ಮುದ್ರಿಸಬೇಕು. ಜೈನಸಾಹಿತ್ಯ ಪ್ರಕಾಶನಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ ಅನು ದಾನ ಘೋಷಣೆ ಮಾಡುವಂತೆ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.

ಶಾಸಕ ಸಿ.ಎನ್‌.ಬಾಲಕೃಷ್ಣ, ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸಾಹಿತಿ ಡಾ.ಕಮಲಾ ಹಂಪನಾ, ನಿವೃತ್ತ ನ್ಯಾಯಾಧೀಶ ಬಾಲಚಂದ್ರ ವಗ್ಯಾನಿ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌, ಕಾರ್ಯಾಧ್ಯಕ್ಷ ಎಸ್‌.ಜಿತೇಂದ್ರಕುಮಾರ್‌, ಆರ್‌.ಕೆ. ಜೈನ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry