ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಲ್ಲಿ ಧಾರಾಕಾರ ಮಳೆ

Last Updated 2 ಅಕ್ಟೋಬರ್ 2017, 7:37 IST
ಅಕ್ಷರ ಗಾತ್ರ

ಕಾರವಾರ (ಉತ್ತರ ಕನ್ನಡ):ಜಿಲ್ಲೆಯ ಮಲೆನಾಡಿನ ಶಿರಸಿ ಹಾಗೂ ಸಿದ್ದಾಪುರದಲ್ಲಿ ಭಾನುವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯವರೆಗೂ ಆರ್ಭಟಿಸಿತು.

ಶಿರಸಿಯ ರಾಜೀವನಗರದ ತಗ್ಗು ಪ್ರದೇಶದಲ್ಲಿನ ಕೆಲ ಮನೆಗಳಿಗೆ ಹಾಗೂ ಕರಿಗುಂಡಿ ರಸ್ತೆಯ ಮಾಸ್ತ್ಯಮ್ಮ ದೇವಾಲಯ ಸಮೀಪದ ಸೇತುವೆ ಎದುರಿನ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ಮರಾಠಿಕೊಪ್ಪದಲ್ಲಿ ಒಂದು ಅಂಗಡಿ ಕುಸಿದು ಹಾನಿಯಾಗಿದೆ. ಅಲ್ಲದೇ ಕೆಲ ರಸ್ತೆಗಳಲ್ಲಿ ಮಳೆ ನಿಂತಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು. ಹೊನ್ನಾವರ, ಕುಮಟಾ ಹಾಗೂ ಮುಂಡಗೋಡದಲ್ಲಿ ಸಾಧಾರಣ ಮಳೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು.

ಸಿದ್ದಾಪುರದಲ್ಲಿ ಮಳೆಯ ಆರ್ಭಟ
ಸಿದ್ದಾಪುರ: ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನದ ನಂತರ ಭಾರಿ ಮಳೆ ಸುರಿಯಿತು. ಪಟ್ಟಣದಲ್ಲಿ ಮಧ್ಯಾಹ್ನ 3ಕ್ಕೆ ಆರಂಭಗೊಂಡ ಮಳೆ, ಒಂದೂವರೆ ತಾಸುಗಳ ಕಾಲ ಗುಡುಗು–ಸಿಡಿಲಿನೊಂದಿಗೆ ಆರ್ಭಟಿಸಿತು. ಆ ನಂತರವೂ ಮಳೆ ಮುಂದುವರಿಯಿತು. ಮಳೆಯಿಂದ ರಸ್ತೆಗಳು ಹೊಳೆಯ ರೂಪ ತಾಳಿದವು.

ಹೊಳೆ–ಹಳ್ಳಗಳು ತುಂಬಿ ಹರಿದವು. ಮಳೆಯಿಂದ ಯಾವುದೇ ಹಾನಿಯಾದ ವರದಿ ಇದುವರೆಗೆ ಬಂದಿಲ್ಲ ಎಂದು ತಹಶೀಲ್ದಾರ್ ಪಟ್ಟರಾಜ ಗೌಡ ಭಾನುವಾರ ಸಂಜೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT