ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ 3 ವಿಜ್ಞಾನಿಗಳಿಗೆ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ

Last Updated 2 ಅಕ್ಟೋಬರ್ 2017, 12:15 IST
ಅಕ್ಷರ ಗಾತ್ರ

ಸ್ಟಾಕ್ಲೋಹೋಮ್: 2017ನೇಸಾಲಿನ ವೈದ್ಯಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಅಮೆರಿಕ ಮೂಲದ ಮೂವರು ವಿಜ್ಞಾನಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೆಫ್ರೆಯ್‌ ಹಾಲ್, ಮೈಕೇಲ್ ರೋಸ್‌ಬಾಶ್ ಮತ್ತು ಮೈಕೇಲ್ ಯಂಗ್ ಈ ಮೂವರು ವಿಜ್ಞಾನಿಗಳು ಈ ವರ್ಷದ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೀವಿಗಳ ದೈಹಿಕ ಕ್ರಿಯೆ ಕುರಿತಾದ ಸಂಶೋಧನೆಗಾಗಿ ಪ್ರಶಸ್ತಿ ಲಭಿಸಿದೆ. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಸಸ್ಯಗಳು, ಪ್ರಾಣಿಗಳು ಹಾಗೂ ಮಾನವರ ದೈಹಿಕ ವ್ಯವಸ್ಥೆ ಹೇಗಿದೆ.  ಅದು ಭೂಮಿಯ ಪರಿಭ್ರಮಣದ ವ್ಯವಸ್ಥೆಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ವಿವರಿಸುತ್ತದೆ.

ಪ್ರಶಸ್ತಿಯು ₹7,20,76,890 (9 ಮಿಲಿಯನ್ ಸ್ವೀಡಿಶ್ ಕ್ರೌನ್ಸ್ ) ಮೊತ್ತ  ಒಳಗೊಂಡಿದೆ ಎಂದು ಸ್ವೀಡನ್ನಿನ ಕರೋಲಿನ್‌ಸ್ಕಾ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT