ಪತಿಯ ಭೇಟಿಗಾಗಿ ಪೆರೊಲ್‌ಗೆ ಅರ್ಜಿ ಸಲ್ಲಿಸಿದ ಶಶಿಕಲಾ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಪತಿಯ ಭೇಟಿಗಾಗಿ ಪೆರೊಲ್‌ಗೆ ಅರ್ಜಿ ಸಲ್ಲಿಸಿದ ಶಶಿಕಲಾ

Published:
Updated:
ಪತಿಯ ಭೇಟಿಗಾಗಿ ಪೆರೊಲ್‌ಗೆ ಅರ್ಜಿ ಸಲ್ಲಿಸಿದ ಶಶಿಕಲಾ

ಚೆನ್ನೈ: ಅನಾರೋಗ್ಯದಿಂದ ನರಳುತ್ತಿರುವ ಪತಿ ಎಂ. ನಟರಾಜನ್‌ ಅವರ ಭೇಟಿಗಾಗಿ, 15 ದಿನಗಳ ಕಾಲ ಜೈಲಿನಿಂದ ಹೊರಗಿರಲು ಅನುಮತಿ ಕೋರಿ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ. ಕೆ. ಶಶಿಕಲಾ ಅವರು ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪಕ್ಷದ ಬಂಡಾಯ ಶಾಸಕ ಹಾಗೂ ಮುಖಂಡ ಟಿ. ಟಿ. ವಿ ದಿನಕರನ್‌ ಹೇಳಿದ್ದಾರೆ.

ಯಕೃತ್ತು ಸಮಸ್ಯೆ ಎದುರಿಸುತ್ತಿರುವ ನಟರಾಜನ್‌ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಕೃತ್ತು ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ದಿನಕರನ್‌ ಅವರು ತಿಳಿಸಿದ್ದಾರೆ.

‘ಶಶಿಕಲಾ ಅವರಿಗೆ ಪೆರೋಲ್‌ ಸಿಗುವ ಬಗ್ಗೆ ನಂಬಿಕೆ ಇದೆ. ಜೈಲಿನಿಂದ ಹೊರಗಿರಲು ಎಷ್ಟು ದಿನಗಳವರೆಗೆ ಅನುಮತಿ ನೀಡಬೇಕೆಂಬುದನ್ನು ಬಂಧೀಖಾನೆ ಇಲಾಖೆ (ಕರ್ನಾಟಕ) ನಿರ್ಧರಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry