ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನ್ಯಾಸ ವೈವಿಧ್ಯದ ಬೆರಗು

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸೂಟು ಬೂಟು, ಝಗಮಗಿಸುವ ದಿರಿಸು ತೊಟ್ಟವರೇ ಅಲ್ಲಿ ನೆರೆದಿದ್ದರು. ಒಳಗೆ ಅಡಿಯಿಡುವ ಎಲ್ಲರಿಗೂ ಚೆಂಡೆ ಹಾಗೂ ಡೋಲಿನ ಸ್ವಾಗತವಿದುದ್ದರಿಂದ ಬಂದವರಿಗೆ ವಿಶೇಷ ಅನುಭವ. ಝಗಮಗಿಸುವ ಬೆಳಕಿಗೆ ಸುತ್ತಲೂ ಓರಣಗೊಂಡಿದ್ದ ಆಭರಣಗಳೂ ಸಾಥ್‌ ನೀಡಿದ್ದವು. ಕಣ್ಣರಳಿಸಿದಷ್ಟು ಹೊಸ ಬಗೆಯ ಆಭರಣಗಳು ಮನಸೆಳೆಯುತ್ತಿದ್ದವು.

ರಾಜಾಜಿನಗರದಲ್ಲಿ ನವರತನ್‌ ಜ್ಯುವೆಲರ್ಸ್‌ನ ನೂತನ ಮಳಿಗೆಯನ್ನು ಆರಂಭಿಸಲಾಯಿತು. ನಟ ಪುನೀತ್‌ ರಾಜ್‌ಕುಮಾರ್‌ ಮಳಿಗೆಯನ್ನು ಉದ್ಘಾಟಿಸಿದರು. ನವರತನ್‌ ನಿರ್ದೇಶಕ ಗೌತಮ್‌ ಚಂದ್‌ ‘ದಶಕಗಳ ಇತಿಹಾಸ ಹೊಂದಿರುವ ನಮ್ಮ ಸಂಸ್ಥೆಯ ಶಾಖೆ ಜನಯನಗರ ಹಾಗೂ ಎಂ.ಜಿ.ರಸ್ತೆಯಲ್ಲಿದೆ. ಬೇರೆ ಬೇರೆ ಭಾಗದ ಜನರು ನಮ್ಮ ಗ್ರಾಹಕರಾಗಿರುವುದರಿಂದ ಅವರ ಬೇಡಿಕೆ ಮೇರೆಗೆ ರಾಜಾಜಿನಗರದಲ್ಲಿ ನೂತನ ಶಾಖೆ ಆರಂಭಿಸುವ ಯೋಚನೆ ಮಾಡಿದೆವು. ಇಲ್ಲಿಯ ಶಾಖೆಗಾಗಿ ವಿಶೇಷ ವಿನ್ಯಾಸಗಳ ಆಭರಣಗಳನ್ನು ಪರಿಚಯಿಸಿದ್ದೇವೆ. ಸಾಂಪ್ರದಾಯಿಕ, ಸಮಕಾಲೀನಹಾಗೂ ಟೆಂಪಲ್‌ ಜ್ಯುವೆಲ್ಲರಿ ಬಗೆಗೆ ಜನರು ಮತ್ತೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಅಂಥ ವಿನ್ಯಾಸಗಳಿಗೆ ಹೆಚ್ಚು ಒತ್ತು ನೀಡಿದ್ದೇವೆ. ಬಗೆಬಗೆ ಆಫರ್‌ಗಳೂ ಇವೆ’ ಎಂದರು.

ಇಲ್ಲಿಯ ಮೊದಲನೇ ಮಹಡಿಯಲ್ಲಿರುವ ಬೆಳ್ಳಿ ಹಾಗೂ ವಜ್ರದ ಆಭರಣಗಳು ಗಮನ ಸೆಳೆಯುತ್ತವೆ. ಬೆಳ್ಳಿ ವಸ್ತುವಿನಲ್ಲಿ ಆಕ್ಸಿಡೈಸ್ಡ್‌ ಫಿನಿಶ್‌ ಇರುವ ಪೂಜಾ ಸಾಮಗ್ರಿಗಳು ಆಕರ್ಷಕವಾಗಿವೆ. ಅಲ್ಲದೆ ಚಿನ್ನದ ಬಣ್ಣ ಲೇಪಿತ ಹಾಗೂ ಜರ್ಕಾನ್‌ ಸ್ಟೋನ್‌ಗಳಿಂದ ಅಲಂಕೃತಗೊಂಡ ಪೂಜಾ ಸಾಮಗ್ರಿಗಳು ಹೆಚ್ಚು ಗಮನ ಸೆಳೆಯುತ್ತವೆ. ತೆಂಗಿನಕಾಯಿ ವಿನ್ಯಾಸ, ಅಗರಬತ್ತಿ ಹೋಲ್ಡರ್‌, ಪನೀರ್‌ ದಾನಿ, ಕಮಲ ಪೀಠ ಹೀಗೆ ವಿವಿಧ ವಿನ್ಯಾಸಗಳಲ್ಲಿ ಅರಳಿರುವ ಇವುಗಳು ಚೆಲುವಿನಿಂದ ಗ್ರಾಹಕರ ಇಷ್ಟವಾಗುತ್ತವೆ. ಫಿಲಿಗ್ರಿ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಪೂಜಾ ಸಾಮಗ್ರಿಗಳು ಪ್ರಮುಖ ಆಕರ್ಷಣೆ. ಅಲ್ಲದೆ ‘ಬೃಹತ್‌ ಗಾತ್ರದ ಕ್ರಿಕೆಟ್‌ ಬ್ಯಾಟ್‌ ಬಾಲ್‌, ಗದೆ, ಖಡ್ಗಗಳಿಗೆ ಹೆಚ್ಚು ಬೇಡಿಕೆ ಇದೆ. ಹೆಚ್ಚಾಗಿ ಉಡುಗೊರೆ ನೀಡಲು ಇವುಗಳನ್ನು ಬಳಸಲಾಗುವುದು’ ಎಂದು ಮಾಹಿತಿ ನೀಡಿದರು ವ್ಯವಸ್ಥಾಪಕ ಶ್ರೀಕಾಂತ್‌.

ವಿನ್ಯಾಸ ವೈವಿಧ್ಯದಿಂದ ಗಮನ ಸೆಳೆಯುತ್ತಿವೆ ಇಲ್ಲಿರುವ ವಜ್ರದ ಆಭರಣಗಳು. ಸಾಂಪ್ರದಾಯಿಕ, ಫ್ಯಾನ್ಸಿ, ರೂಬಿ, ಎಮಿರಾಲ್ಡ್‌, ಮುತ್ತುಗಳಿಂದ ಅಲಂಕೃತಗೊಂಡ ವಿವಿಧ ಆಭರಣಗಳು ಇಲ್ಲಿವೆ. ಅಲ್ಲದೆ ಒಂದೇ ಆಭರಣವನ್ನು ಎರಡು ಬಗೆಯಲ್ಲಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಮಕ್ರಿಮಾಲಾ ಹಾಗೂ ಎನಾಮಲ್‌ ಕುಸುರಿ ಇರುವ ಮೀನಾಕರಿ ಪೇಂಟಿಂಗ್‌ ಹೊಂದಿದ ಕಿವಿಯೋಲೆ ಇಲ್ಲಿಯ ವಿಶೇಷ. ರೋಸ್‌ ಲೋಟಸ್‌ ವಿನ್ಯಾಸದಲ್ಲಿ ಅರಳಿದ ನೆಕ್ಲೆಸ್‌ ನೋಡುಗರ ಚಿತ್ತವನ್ನು ಆಕರ್ಷಿಸಿತ್ತು. ಅದರ ಅಂದಚೆಂದವನ್ನು ಕಣ್ತುಂಬಿಕೊಳ್ಳುತ್ತಿದ್ದ ಗ್ರಾಹಕರಿಗೆ ಅದರ ಬೆಲೆ ₹ 50 ಲಕ್ಷ ಎಂದಾಗ ಗಾಬರಿ ಆಶ್ಚರ್ಯ ಒಟ್ಟಿಗೇ ಆಯಿತು. ಅಲ್ಲೇ ಪಕ್ಕದಲ್ಲಿದ್ದ ಹಸಿರು ಹರಳಿನ ಸರಕ್ಕೆ ಒಂದು ಕೋಟಿ ರೂಪಾಯಿ ಎಂದಾಗ ಕಣ್ಣರಳಿಸಿ ನಿಂತರು.

ಬಂಗಾರದ ಆಭರಣಗಳಲ್ಲಿ ಯುವಮನಸ್ಸುಗಳನ್ನು ಹೆಚ್ಚು ಆಕರ್ಷಿಸುತ್ತಿರುವ ರೇಡಿಯಂ ಕಟ್ಟಿಂಗ್‌ ವಿನ್ಯಾಸದ ಬಗೆ ಬಗೆ ಬಳೆಗಳು ಇಲ್ಲಿದ್ದವು. ದುಬೈ ವಿನ್ಯಾಸಗಳು, ರಾಜ್‌ಕೋಟ್‌ ಖಿಲಾ ಕುಸುರಿ ಆಭರಣಗಳಿದ್ದವು. ಟೆಂಪಲ್‌ ಜ್ಯುವೆಲ್ಲರಿ ಖದರೇ ಇರುವ, ವಿಭಿನ್ನ ಬಣ್ಣದಲ್ಲಿರುವ ಗೋಕಾಕ್‌ ವಿನ್ಯಾಸದ ನೆಕ್‌ಲೆಸ್‌ಗಳು ವಿಶೇಷ ಎನಿಸಿದವು. ತುಸು ಕಪ್ಪಾಗಿ ಕಾಣುವ ಆಕ್ಸಿಡೈಸ್ಡ್‌ ವಿನ್ಯಾಸದ ತರಹೇವಾರಿ ಆಭರಣಗಳು ಜನರ ಗಮನ ಸೆಳೆದವು.

‘ಕಾಲ ಬದಲಾಗಿದೆ. ಎಲ್ಲರೂ ಥಟ್ಟನೆ ಕಣ್ಣಿಗೆ ಬೀಳುವಂಥ ದೊಡ್ಡ ವಿನ್ಯಾಸದ ಆಭರಣಗಳನ್ನೇ ಹೆಚ್ಚು ಖರೀದಿಸುತ್ತಾರೆ. ಹೀಗಾಗಿಯೇ ಉಂಗುರ, ಬಳೆ, ಕಡ, ನೆಕ್ಲೆಸ್‌, ಕಿವಿಯೋಲೆ ಹೀಗೆ ಎಲ್ಲ ಆಭರಣಗಳ ಗಾತ್ರವನ್ನು ಹೆಚ್ಚಿಸಿದ್ದೇವೆ. ಆಕ್ಸಿಡೈಸ್ಡ್‌ ಹಾಗೂ ಆ್ಯಂಟಿಕ್‌ ನೋಟ ಇರುವ ಆಭರಣಗಳೇ ಜನರಿಗೆ ಹೆಚ್ಚು ಇಷ್ಟವಾಗುತ್ತಿವೆ’ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT