ನವರಸ ನಾಯಕನ 8ಎಂಎಂ ಪಿಸ್ತೂಲು

ಗುರುವಾರ , ಜೂನ್ 20, 2019
27 °C

ನವರಸ ನಾಯಕನ 8ಎಂಎಂ ಪಿಸ್ತೂಲು

Published:
Updated:
ನವರಸ ನಾಯಕನ 8ಎಂಎಂ ಪಿಸ್ತೂಲು

ನವರಸ ನಾಯಕ ಜಗ್ಗೇಶ್ ಅವರು ಈ ಬಾರಿ ಕೈಯಲ್ಲಿ 8 ಎಂ.ಎಂ. ಪಿಸ್ತೂಲ್ ಹಿಡಿದಿದ್ದಾರೆ. ಹೀಗೆ ಅವರು ಪಿಸ್ತೂಲು ಹಿಡಿದಿರುವುದು ಒಂದು ಚಿತ್ರದಲ್ಲಿನ ಅಭಿನಯಕ್ಕಾಗಿಯೇ ಹೊರತು ಬೇರೇನಕ್ಕೂ ಅಲ್ಲ. ಅಂದಹಾಗೆ, ಚಿತ್ರದ ಹೆಸರು ಕೂಡ '8ಎಂಎಂ'. ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು.

'ಹಲವು ಕಥೆಗಳನ್ನು ಕೇಳಿಸಿಕೊಂಡಿದ್ದರೂ ಅವುಗಳನ್ನು ಮನಸ್ಸು ಒಪ್ಪಿಕೊಂಡಿರಲಿಲ್ಲ. ಈ ಸಿನಿಮಾದ ಕಥೆ ಕೇಳಿದಾಗ ಮನಸ್ಸು ಥ್ರಿಲ್‌ ಆಯಿತು. ನನ್ನ ವಯಸ್ಸಿಗೆ ತಕ್ಕಂತಹ ಪಾತ್ರವೊಂದನ್ನು ಈ ಸಿನಿಮಾದಲ್ಲಿ ನಿಭಾಯಿಸುತ್ತಿದ್ದೇನೆ' ಎಂದು ಹೇಳಿದರು ಜಗ್ಗೇಶ್. ಈ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆಯಂತೆ. 'ಜಪಾನಿ ಸಿನಿಮಾ ಒಂದರಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಲು ಮುಂದಾಗಿದ್ದೇನೆ' ಎಂದು ಹೇಳಿದವರು ನಿರ್ದೇಶಕ ಹರಿಕೃಷ್ಣ. ನಾರಾಯಣಸ್ವಾಮಿ, ಇನ್‍ಫ್ಯಾಂಟ್‌ ಪ್ರದೀಪ್ ಮತ್ತು ಸಲೀಂ ಷಾ ಅವರು ಈ ಚಿತ್ರಕ್ಕಾಗಿ ಹಣ ಹೂಡಿಕೆ ಮಾಡುತ್ತಿದ್ದಾರಂತೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry