ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧತೆ ಎಲ್ಲಿ?

ಸೋಮವಾರ, ಮೇ 27, 2019
33 °C

ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧತೆ ಎಲ್ಲಿ?

Published:
Updated:
ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧತೆ ಎಲ್ಲಿ?

ಕೆಲವು ಸಿನಿಮಾ ನಟ– ನಟಿಯರು ರಾಜಕೀಯ ರಂಗಪ್ರವೇಶಕ್ಕೆ ವಿಶೇಷ ಅಸಕ್ತಿ ತೋರಿಸುತ್ತಿದ್ದಾರೆ. ಇಂಥವರಿಗೆಲ್ಲ ಎಂ.ಜಿ.ಆರ್. ಸ್ಫೂರ್ತಿಯಾಗಿರಬೇಕು. ಒಬ್ಬ ಹೀರೊ, ರಾಜಕೀಯ ನಾಯಕನಾಗಿ ಮಿಂಚಲು ಸಾಧ್ಯ ಎಂಬುದಕ್ಕೆ ಎಂ.ಜಿ.ಆರ್. ಒಂದು ಮಾದರಿಯಾಗಿದ್ದಾರೆ. ಆದರೆ ಎಂ.ಜಿ.ಆರ್. ರಾಜಕೀಯ ರಂಗ ಪ್ರವೇಶಕ್ಕೆ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಅದನ್ನು ಮರೆಯಬಾರದು.

ಪ್ರತಿ ಚಿತ್ರದಲ್ಲೂ ಜನಪರ ಹೋರಾಟದಲ್ಲಿ ತೊಡಗಿದ ಮುಖಂಡನ ಪಾತ್ರವನ್ನೇ ಆಯ್ದುಕೊಂಡರು. ಆ ಮೂಲಕ, ತನ್ನನ್ನು ರಾಜಕೀಯ ನೇತಾರನನ್ನಾಗಿ ಜನರು ಒಪ್ಪಿಕೊಳ್ಳುವಂತೆ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಕೆಲಸ ಮಾಡಿದ್ದರು. ನಟನಾಗಿರುವಾಗಲೇ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡು ಅನೇಕರಿಗೆ ಸಹಾಯ ನೀಡಿದ್ದರು.

ಇಂತಹ ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಿ, ತಾರಾ ವರ್ಚಸ್ಸಿನ ಬಲದಿಂದಲೇ ಜನರನ್ನು ಒಲಿಸಿಕೊಳ್ಳಬಹುದು ಎಂದು ಭಾವಿಸುವುದು ಬರೀ ಭ್ರಮೆ.

–ಸತ್ಯಬೋಧ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry