ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’

ಬುಧವಾರ, ಜೂನ್ 19, 2019
30 °C

ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’

Published:
Updated:
ಆಸ್ತಿ ವಿವಾದ: ‘ಜಿಲ್ಲಾಧಿಕಾರಿಗೆ ನ್ಯಾಯ ನಿರ್ಣಯದ ಹಕ್ಕಿಲ್ಲ’

ನವದೆಹಲಿ: ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿಯಲ್ಲಿ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಿಲ್ಲಾಧಿಕಾರಿ ಸೇರಿ ಸರ್ಕಾರದ ಆಡಳಿತ ನಿರ್ವಹಣೆಯ ಹೊಣೆ ಇರುವ ಅಧಿಕಾರಿಗಳಿಗೆ ಆಸ್ತಿ ವಿವಾದ ಪರಿಹರಿಸುವ ಅಧಿಕಾರ ಕೊಡುವುದು ಕಾನೂನು ವ್ಯವಸ್ಥೆಯನ್ನು ನಾಶಪಡಿಸುತ್ತದೆ. ಜಿಲ್ಲಾಧಿಕಾರಿಯು ಸರ್ಕಾರದ ಅಧಿಕಾರಿ.  ಆಸ್ತಿ ವಿವಾದಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ನಿರ್ದಿಷ್ಟ ಅಧಿಕಾರ ಇದೆ ಎಂದು ಸ್ಪಷ್ಟವಾಗಿ ಕಾನೂನಿನಲ್ಲಿ ಉಲ್ಲೇಖವಿದ್ದರೆ ಮಾತ್ರ ಆ ಅಧಿಕಾರವನ್ನು ಚಲಾಯಿ ಸಬಹುದು ಎಂದು ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಚಂದ್ರಚೂಡ ಅವರ ಪೀಠ ಅಭಿಪ್ರಾಯಪಟ್ಟಿದೆ.

ಹರಿದ್ವಾರದ ಕುಚಿಲಾಲ್‌ ರಾಮೇಶ್ವರ್‌ ಆಶ್ರಮ ಟ್ರಸ್ಟ್‌ಗೆ ಉತ್ತರಾಧಿಕಾರಿಗಳಿಲ್ಲ ಎಂಬ ಕಾರಣದಿಂದ ಟ್ರಸ್ಟ್‌ನ ಆಸ್ತಿಯನ್ನು ಹರಿದ್ವಾರದ ಜಿಲ್ಲಾಧಿಕಾರಿ ಸರ್ಕಾರದ ವಶಕ್ಕೆ ಪಡೆದಿದ್ದರು. ಈ ಆದೇಶವನ್ನು ಉತ್ತರಾಖಂಡ ಹೈಕೋರ್ಟ್‌ ಎತ್ತಿ ಹಿಡಿದಿತ್ತು. 2 ಆದೇಶಗಳನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry