ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ಆರೋಪ: ಇಬ್ಬರ ಬಂಧನ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗೊಂಡಾ, (ಉತ್ತರ ಪ್ರದೇಶ): ಗೋಹತ್ಯೆಯಲ್ಲಿ ಭಾಗಿಯಾದ ಆರೋಪದಡಿ ಭಟ್ಪುರ್ವಾ ಎಂಬ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಣೇಶ್‌ ಪ್ರಸಾದ್‌ ದೀಕ್ಷಿತ್‌ ಎಂಬುವವರ ಮನೆಯಿಂದ ಹಸುವನ್ನು ಕೊಂಡೊಯ್ದು ನೆರೆಯ ಮೈದಾನದಲ್ಲಿ ಅದನ್ನು ಹತ್ಯೆ ಮಾಡಿದ ರಾಮ್‌ ಸೇವಕ್‌ ಹಾಗೂ ಮಂಗ್ಲಿ ಎಂಬುವವರನ್ನು ಕಠಿಣ ರಾಷ್ಟ್ರೀಯ ಭದ್ರತೆ ಕಾಯ್ದೆ ಅಡಿ ಬಂಧಿಸಲಾಗಿದೆ. ಗ್ರಾಮದಲ್ಲಿ ಮೊಹರಂ ಮೆರವಣಿಗೆ ಇದ್ದುದರಿಂದ ಉದ್ದೇಶಪೂರ್ವಕವಾಗಿ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೂರ್ತಿ ವಿಸರ್ಜನೆ: ವರದಿಗೆ ಸೂಚನೆ

ನವದೆಹಲಿ (ಪಿಟಿಐ): ಗಣೇಶ ಮತ್ತು ದುರ್ಗಾಮೂರ್ತಿಗಳ ವಿಸರ್ಜನೆ ನಂತರ ಯಮುನಾ ನದಿಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

‌ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಿಸಿದ್ದ ಹಾಗೂ ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಿದಿದ್ದ ಸಾವಿರಾರು ಗಣೇಶ ಮೂರ್ತಿಗಳನ್ನು ಯಮುನಾ ನದಿಯಲ್ಲಿ ಗಣೇಶ ಚತುರ್ಥಿ ವೇಳೆ ವಿಸರ್ಜನೆ ಮಾಡಲಾಗಿದೆ.

ಯೋಧನ ವಿರುದ್ಧ ಪ್ರಕರಣ

ನವದೆಹಲಿ (ಪಿಟಿಐ): ನಕಲಿ ದಾಖಲೆ ಬಳಸಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಹಾಗೂ ಶೋಪಿಯಾನ್‌ ಜಿಲ್ಲೆಗಳಿಂದ ಖಾಸಗಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಸೇನಾ ಸಿಬ್ಬಂದಿಗೆ ಸಹಕರಿಸಿದ ಆರೋಪದ ಮೇಲೆ ಗಡಿ ಭದ್ರತಾ ಪಡೆಯ ಕಮಾಂಡರ್‌ ಒಬ್ಬರ ವಿರುದ್ಧ ಸಿಬಿಐ ದೂರು ದಾಖಲಿಸಿದೆ.

ಯುವಕನ್ನು ಥಳಿಸಿ ಕೊಂದ ಗ್ರಾಮಸ್ಥರು

ಮುಜಫ್ಫರ್‌ನಗರ (ಪಿಟಿಐ): 50ಕ್ಕೂ ಹೆಚ್ಚು ರೈತರ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿದ ಶಂಕೆಯ ಮೇಲೆ, ಜಿಲ್ಲೆಯ ಧುಡ್ಲಿ ಎಂಬ ಗ್ರಾಮಸ್ಥರು ಸೋಮವಾರ 20 ವರ್ಷದ ಯುವಕನೊಬ್ಬನನ್ನು ಥಳಿಸಿ ಕೊಂದು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT