ಬಂದೂಕು ಪರವಾನಗಿ : ಉತ್ತರ ಪ್ರದೇಶ ಮುಂದು

ಬುಧವಾರ, ಮೇ 22, 2019
29 °C

ಬಂದೂಕು ಪರವಾನಗಿ : ಉತ್ತರ ಪ್ರದೇಶ ಮುಂದು

Published:
Updated:

ನವದೆಹಲಿ : ಅತೀ ಹೆಚ್ಚು ಬಂದೂಕು ಪರವಾನಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿನ 12.79 ಲಕ್ಷ ಜನರು ಬಂದೂಕು ಬಳಸಲು ಪರವಾನಗಿ ಪಡೆದಿದ್ದಾರೆ.

ಭಯೋತ್ಪಾದಕರ ಸಮಸ್ಯೆ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರ ಎರಡನೇ ಸ್ಥಾನದಲ್ಲಿದೆ. ಆ ರಾಜ್ಯದ 3.69 ಲಕ್ಷ ಜನರ ಬಳಿ ಬಂದೂಕು ಪರವಾನಗಿ ಇದೆ.

3.59 ಲಕ್ಷ ಬಂದೂಕು ಪರವಾನಗಿಗಳನ್ನು ನೀಡಿರುವ ಪಂಜಾಬ್‌, ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.  ಕರ್ನಾಟಕದ 1,13,631 ಮಂದಿ ಬಂದೂಕು ಬಳಸಲು ಪರವಾನಗಿ ಪಡೆದಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಅದರ ಪ್ರಕಾರ, 31 ಡಿಸೆಂಬರ್ 2016ರವರೆಗೆ ದೇಶದಾದ್ಯಂತ ಬಂದೂಕು ಪರವಾನಗಿ ಹೊಂದಿರುವವರ ಸಂಖ್ಯೆ 33.69 ಲಕ್ಷ.

ಕೇಂದ್ರಾಡಳಿತ ಪ್ರದೇಶಗಳಾದ ದಾಮನ್‌ ಮತ್ತು ದಿಯು ಹಾಗೂ ದಾದ್ರಾ ಮತ್ತು ಹವೇಲಿಗಳಲ್ಲಿ ನೀಡಲಾಗಿರುವ ಬಂದೂಕು ಪರವಾನಗಿಗಳು 125.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry