ಮಾರುತಿಯ ಹೊಸ ‘ಎಸ್‌–ಕ್ರಾಸ್‌’

ಬುಧವಾರ, ಜೂನ್ 19, 2019
31 °C

ಮಾರುತಿಯ ಹೊಸ ‘ಎಸ್‌–ಕ್ರಾಸ್‌’

Published:
Updated:
ಮಾರುತಿಯ ಹೊಸ ‘ಎಸ್‌–ಕ್ರಾಸ್‌’

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ತನ್ನ ಕ್ರಾಸ್‌ಓವರ್‌ ‘ಎಸ್‌–ಕ್ರಾಸ್‌’ನ ನವೀಕೃತ ಮಾದರಿಯನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ನಾಲ್ಕು ಮಾದರಿಯಲ್ಲಿ ಲಭ್ಯ  ಹೊಸ ‘ಎಸ್‌– ಕ್ರಾಸ್‌’ನ  ಬೆಲೆ (ದೆಹಲಿ ಎಕ್ಸ್‌ಷೋರೂಂ) ₹ 8.49 ಲಕ್ಷದಿಂದ ₹ 11.29 ಲಕ್ಷದವರೆಗೆ ಇದೆ.

‘ಹೊಸ ಸ್ವರೂಪದಲ್ಲಿ ಇರುವ ‘ಎಸ್‌–ಕ್ರಾಸ್‌’ ನಮ್ಮ ಬದಲಾವಣೆಯ ಪಯಣದಲ್ಲಿ ಹೊಸ ಮೈಲುಗಲ್ಲು ಆಗಿದೆ. ಇದು. ನಗರ ಪ್ರದೇಶದ ವಿಲಾಸಿ ವಾಹನಗಳ ವಿಭಾಗದಲ್ಲಿ ಸಂಸ್ಥೆಯ ಮಾರುಕಟ್ಟೆ ಪಾಲನ್ನು ಇದು ಗಮನಾರ್ಹವಾಗಿ ಹೆಚ್ಚಿಸಲಿದೆ’ ಎಂದು ‘ಎಂಎಸ್‌ಐ’ನ ವ್ಯವಸ್ಥಾಪಕ ನಿರ್ದೇಶಕ  ಕೆನಿಚಿ ಅಯುಕವಾ  ಹೇಳಿದ್ದಾರೆ.

ಪರಿಸರ ಸ್ನೇಹಿ ತಂತ್ರಜ್ಞಾನ (ಡಿಡಿಐಎಸ್‌200) ಒಳಗೊಂಡಿರುವ ‘ಎಸ್‌–ಕ್ರಾಸ್‌’ನಿಂದ ಪರಿಸರ ಮಾಲಿನ್ಯವು ಗಮನಾರ್ಹವಾಗಿ ಕಡಿಮೆಯಾಗಲಿದೆ.

ಹೊಸ ‘ಎಸ್‌–ಕ್ರಾಸ್‌’ ಅಭಿವೃದ್ಧಿಪಡಿಸಲು ‘ಎಂಎಸ್‌ಐ’ ಮತ್ತು ಅದರ ಬಿಡಿಭಾಗ ಪೂರೈಕೆದಾರರು ₹ 100 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry