ಎಸ್‌ಬಿಐ: ಉಳಿತಾಯ ಖಾತೆ ಸ್ಥಗಿತ ಶುಲ್ಕ ರದ್ದು

ಗುರುವಾರ , ಜೂನ್ 20, 2019
27 °C

ಎಸ್‌ಬಿಐ: ಉಳಿತಾಯ ಖಾತೆ ಸ್ಥಗಿತ ಶುಲ್ಕ ರದ್ದು

Published:
Updated:
ಎಸ್‌ಬಿಐ: ಉಳಿತಾಯ ಖಾತೆ ಸ್ಥಗಿತ ಶುಲ್ಕ ರದ್ದು

ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಉಳಿತಾಯ ಖಾತೆ ಸ್ಥಗಿತಗೊಳಿಸುವುದಕ್ಕೆ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ರದ್ದು ಮಾಡಿದೆ.

ಹೊಸ ನಿಯಮವು ಅಕ್ಟೋಬರ್‌ 1ರಿಂದಲೇ ಜಾರಿಗೆ ಬಂದಿದೆ. ಇಂತಹ ಖಾತೆಗಳು ಒಂದು ವರ್ಷದಷ್ಟು ಹಳೆಯದಾಗಿದ್ದರೆ ಮಾತ್ರ ಶುಲ್ಕ ರದ್ದತಿ ಅನ್ವಯಗೊಳ್ಳಲಿದೆ. ಹೊಸ ನಿಯಮದಡಿ, ಮೂಲ ಉಳಿತಾಯ ಬ್ಯಾಂಕ್‌ ಖಾತೆಗಳನ್ನು (ಬಿಎಸ್‌ಬಿಡಿ) ಸ್ಥಗಿತಗೊಳಿಸಿದರೂ ಅದಕ್ಕೆ ಯಾವುದೇ ಶುಲ್ಕ ವಿಧಿಸದಿರಲು ಬ್ಯಾಂಕ್‌ ನಿರ್ಧರಿಸಿದೆ.

ಇದಕ್ಕೂ ಮೊದಲು ಬ್ಯಾಂಕ್‌, ಉಳಿತಾಯ ಖಾತೆ ಸ್ಥಗಿತಗೊಳಿಸಿದ ಗ್ರಾಹಕರಿಂದ ₹ 500 ಮತ್ತು ಜಿಎಸ್‌ಟಿ ತೆರಿಗೆ ವಸೂಲಿ ಮಾಡುತ್ತಿತ್ತು.ಮೃತಪಟ್ಟ ಗ್ರಾಹಕರ ಖಾತೆ ಸ್ಥಗಿತಕ್ಕೆ ವಿಧಿಸಲಾಗುತ್ತಿದ್ದ ಶುಲ್ಕವನ್ನೂ ರದ್ದುಪಡಿಸಲಾಗಿದೆ. ಖಾತೆ ತೆರೆದ 14 ದಿನಗಳ ನಂತರ ಮತ್ತು ಖಾತೆಗೆ ಒಂದು ವರ್ಷ ಪೂರ್ಣವಾಗುವ ಮೊದಲೇ ಸ್ಥಗಿತಗೊಳಿಸಿದರೆ ₹ 500 ಮತ್ತು ಜಿಎಸ್‌ಟಿ ಶುಲ್ಕ ವಸೂಲಿ ಅನ್ವಯವಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry