ಬಡ್ಡಿ ದರ ಕಡಿತ: ಕೇಂದ್ರದ ನಿರೀಕ್ಷೆ

ಗುರುವಾರ , ಜೂನ್ 27, 2019
30 °C

ಬಡ್ಡಿ ದರ ಕಡಿತ: ಕೇಂದ್ರದ ನಿರೀಕ್ಷೆ

Published:
Updated:
ಬಡ್ಡಿ ದರ ಕಡಿತ: ಕೇಂದ್ರದ ನಿರೀಕ್ಷೆ

ನವದೆಹಲಿ: ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇ 5.7) ಕುಸಿದಿರುವ ಆರ್ಥಿಕ ವೃದ್ಧಿ ದರಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಅಲ್ಪಾವಧಿ ಬಡ್ಡಿ ದರ ಕಡಿತ ಮಾಡಿ ನೆರವಿನ ಹಸ್ತ ಚಾಚಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ.

ಏರುಗತಿಯಲ್ಲಿ ಇರುವ ಹಣದುಬ್ಬರ ಮತ್ತು ಜಿಎಸ್‌ಟಿ ಜಾರಿಯ ಪ್ರಭಾವಕ್ಕೆ ಒಳಗಾಗಿ ಇನ್ನಷ್ಟು ಕುಂಠಿತಗೊಂಡಿರುವ ಆರ್ಥಿಕತೆಗೆ ತುರ್ತಾಗಿ ಉತ್ತೇಜನ ನೀಡಬೇಕಾಗಿರುವುದರಿಂದ ಆರ್‌ಬಿಐ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಬೇಕು ಎನ್ನುವ ಹಕ್ಕೊತ್ತಾಯವು ಕೈಗಾರಿಕಾ ವಲಯದಿಂದ ಕೇಳಿ ಬರುತ್ತಿದೆ. ಆರ್ಥಿಕ ಪರಿಣತರೂ ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರವು ಏರು ಹಾದಿಯಲ್ಲಿ ಇರುವುದರಿಂದ ಆರ್‌ಬಿಐ, ಬಡ್ಡಿ ದರ ವಿಷಯದಲ್ಲಿ ಈ ಬಾರಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ಬ್ಯಾಂಕ್‌ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರೀಯ ಬ್ಯಾಂಕ್‌ ಇದೇ 4ರಂದು ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ.

ಕುಂಠಿತ ಬೆಳವಣಿಗೆ, ಹಣದುಬ್ಬರ ಏರಿಕೆ, ಜಾಗತಿಕ ಅನಿಶ್ಚಿತತೆ ಕಾರಣಕ್ಕೆ ಆರ್‌ಬಿಐ ಗೊಂದಲದಲ್ಲಿ ಇದೆ. ಈ ಕಾರಣಕ್ಕೆ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಲಿಕ್ಕಿಲ್ಲ ಎಂದು ಎಸ್‌ಬಿಐ ರಿಸರ್ಚ್‌ ಅಭಿಪ್ರಾಯಪಟ್ಟಿದೆ.

ಏರುಗತಿಯಲ್ಲಿ ಇರುವ ಹಣದುಬ್ಬರ ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಯಿಂದಾಗಿ ಬಡ್ಡಿ ದರ ಕಡಿಮೆ ಮಾಡಲು ಸೀಮಿತ ಅವಕಾಶ ಇದೆ ಎಂದು ಹಣಕಾಸು ಸಂಸ್ಥೆ ಮೋರ್ಗನ್‌ ಸ್ಟ್ಯಾನ್ಲೆ ಅಭಿಪ್ರಾಯಪಟ್ಟಿದೆ.

ಚಿಲ್ಲರೆ ಹಣದುಬ್ಬರ ಕಡಿಮೆ ಮಟ್ಟದಲ್ಲಿಯೇ ಇರುವುದರಿಂದ ಆರ್‌ಬಿಐ ಬಡ್ಡಿ ದರ ಕಡಿತಕ್ಕೆ ಅವಕಾಶ ಇದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕಳೆದ ವಾರ ಅಭಿಪ್ರಾಯಪಟ್ಟಿದ್ದರು.

ಹಣದುಬ್ಬರ ಭೀತಿ ಕಡಿಮೆಯಾಗಿದೆ ಎನ್ನುವ ಕಾರಣ ನೀಡಿ ಆರ್‌ಬಿಐ, ಆಗಸ್ಟ್‌ ತಿಂಗಳಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿತ್ತು. 10 ತಿಂಗಳಲ್ಲಿನ ಮೊದಲ ಬಡ್ಡಿ ಕಡಿತ ಅದಾಗಿತ್ತು.

ಆದರೆ, ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 3.36ಕ್ಕೆ ಏರಿಕೆಯಾಗಿತ್ತು.  ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಜುಲೈ ತಿಂಗಳಲ್ಲಿ ಶೇ 2.36ರಷ್ಟಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry