ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಮೊಬೈಲ್‌ ಸೇವೆ: ಅಭಿಪ್ರಾಯ ಆಹ್ವಾನ

Last Updated 2 ಅಕ್ಟೋಬರ್ 2017, 19:38 IST
ಅಕ್ಷರ ಗಾತ್ರ

ನವದೆಹಲಿ: ವಿಮಾನಗಳಲ್ಲಿ ಮೊಬೈಲ್‌ ಫೋನ್‌ ಬಳಸುವ ಕುರಿತು ಅಭಿಪ್ರಾಯ ಸೂಚಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಮನವಿ ಮಾಡಿಕೊಂಡಿದೆ.

ವಿಮಾನ ಪ್ರಯಾಣ ವೇಳೆ ಮೊಬೈಲ್‌ ಸೇವೆ ಒದಗಿಸುವ ಕುರಿತು ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಭಾರತದ ವಾಯುಗಡಿಯಲ್ಲಿ ಹಾರಾಟ ನಡೆಸುವ ವಿಮಾನಗಳಲ್ಲಿ ಕರೆ, ಡೇಟಾ ಮತ್ತು ವಿಡಿಯೊ ಸೇವೆಗಳನ್ನು ಒದಗಿಸುವ ಕುರಿತು ನಿಯಮಗಳನ್ನು ರೂಪಿಸಲು ಸಾರ್ವಜನಿಕರ ಅಭಿಪ್ರಾಯ ಕೋರುತ್ತಿರುವುದಾಗಿ ‘ಟ್ರಾಯ್‌’ ತಿಳಿಸಿದೆ.

ಉಪಗ್ರಹ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ವಿಮಾನಗಳಲ್ಲಿ ಮೊಬೈಲ್‌ ಸೇವೆ ಒದಗಿಸಲು ಸಾಧ್ಯವಿದೆ. ವಿಮಾನವು ಪ್ರತಿ ಗಂಟೆಗೆ 800 ಕಿ.ಮೀ ವೇಗದಲ್ಲಿ ಮತ್ತು 10,000 ಮೀಟರ್‌ ಎತ್ತರದಲ್ಲಿ ಹಾರಾಟ ನಡೆಸುವಾಗ ಪ್ರಯಾಣಿಕರಿಗೆ ಉಪಗ್ರಹ ಆಧಾರಿತ ಮೊಬೈಲ್‌ ಸೇವೆ ಒದಗಿಸಬಹುದಾಗಿದೆ ಎಂದು ‘ಟ್ರಾಯ್‌’ ಅಭಿಪ್ರಾಯಪಟ್ಟಿದೆ.

2014ರಲ್ಲಿ ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರ ಸಂಘ ಈ ಬಗ್ಗೆ ನಡೆಸಿದ್ದ ಸಮೀಕ್ಷೆಯಲ್ಲಿ, ಶೇ 80ರಷ್ಟು ಪ್ರಯಾಣಿಕರು ವಿಮಾನದಲ್ಲಿ ವೈ–ಫೈ ಬಳಸಲು ಇಚ್ಛಿಸುವುದಾಗಿ ತಿಳಿಸಿದ್ದರು.

ಈಗಿರುವ ಪರವಾನಗಿಯಲ್ಲೇ ಈ ಸೌಲಭ್ಯ ಒದಗಿಸಬೇಕೆ ಅಥವಾ ಪ್ರತ್ಯೇಕ ಪರವಾನಗಿ ನೀಡಬೇಕೆ ಎನ್ನುವುದರ ಬಗ್ಗೆಯೂ ‘ಟ್ರಾಯ್‌’‌ ಅಭಿಪ್ರಾಯ ಕೋರಿದೆ.

ಜನರು ತಮ್ಮ ಅಭಿಪ್ರಾಯ ತಿಳಿಸಲು ಅಕ್ಟೋಬರ್‌ 27 ಮತ್ತು ಪ್ರತಿ ಅಭಿಪ್ರಾಯ ಸಲ್ಲಿಸಲು ನವೆಂಬರ್‌ 3 ಕೊನೆಯ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT