ಎರಡನೇ ಸುತ್ತಿಗೆ ಮರಿನ್ ಸಿಲಿಕ್

ಮಂಗಳವಾರ, ಜೂನ್ 25, 2019
29 °C
ಜಪಾನ್ ಓಪನ್ ಟೆನಿಸ್ ಟೂರ್ನಿ; ಕೆವಿನ್ ಆ್ಯಂಡರ್ಸನ್‌ಗೆ ಜಯ

ಎರಡನೇ ಸುತ್ತಿಗೆ ಮರಿನ್ ಸಿಲಿಕ್

Published:
Updated:
ಎರಡನೇ ಸುತ್ತಿಗೆ ಮರಿನ್ ಸಿಲಿಕ್

ಟೋಕಿಯೊ: ಅಗ್ರ ಶ್ರೇಯಾಂಕದ ಆಟಗಾರ ಮರಿನ್ ಸಿಲಿಕ್ ಸೋಮವಾರ ಇಲ್ಲಿ ಆರಂಭವಾದ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮೊದಲ ಸುತ್ತಿನ ಹಣಾಹಣಿಯಲ್ಲಿ ಸಿಲಿಕ್‌ 6–3, 6–2ರಲ್ಲಿ ಗ್ರೀಸ್‌ನ ಸ್ಟಿಫನ್ಸ್ ಸಿಟ್ಸಿಪನ್ಸ್ ಅವರನ್ನು ಮಣಿಸಿದರು.  ಕ್ರೊವೇಷ್ಯಾದ ಸಿಲಿಕ್ ಗ್ರೀಸ್ ಆಟಗಾರನ ಎದುರು ಸುಲಭದಲ್ಲಿ ಗೆಲುವು ದಾಖಲಿಸಿದರು. 73 ನಿಮಿಷದ ಪೈಪೋಟಿಯಲ್ಲಿ ಅವರು ಎದುರಾಳಿಯ ಅನಗತ್ಯ ತಪ್ಪುಗಳನ್ನು ಬಳಸಿಕೊಂಡು ಜಾಣ್ಮೆಯ ಆಟದಿಂದ ಜಯ ಒಲಿಸಿಕೊಂಡರು.

ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡ ರ್ಸನ್‌ 6–2, 7–6ರಲ್ಲಿ ಫ್ರಾನ್ಸ್‌ನ ಗಿಲ್ಲೆಸ್‌ ಸಿಮೊನ್ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಹ್ಯಾರಿಸ್ 6–4, 4–6, 6–4ರಲ್ಲಿ ಜಪಾನಿನ ಯುಸುಕೆ ತಕಹಷಿ ಎದುರು ಗೆದ್ದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry