ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾ ಹೆರಾತ್‌ 400 ವಿಕೆಟ್‌ ಸಾಧನೆ

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌: ಶ್ರೀಲಂಕಾ ತಂಡಕ್ಕೆ ರೋಚಕ ಗೆಲುವು
Last Updated 2 ಅಕ್ಟೋಬರ್ 2017, 19:56 IST
ಅಕ್ಷರ ಗಾತ್ರ

ಅಬುಧಾಬಿ: ಶ್ರೀಲಂಕಾ ಕ್ರಿಕೆಟ್‌ ತಂಡದ ಬೌಲರ್‌ ರಂಗನಾ ಹೆರಾತ್‌, ಸೋಮವಾರ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಗಳಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಹೆರಾತ್‌ (43ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಲಂಕಾ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 21ರನ್‌ಗಳಿಂದ ಗೆದ್ದಿತು.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಗೆಲುವಿಗೆ 136ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಸರ್ಫರಾಜ್‌ ಅಹ್ಮದ್‌ ಬಳಗ 47.4 ಓವರ್‌ಗಳಲ್ಲಿ 114ರನ್‌ಗಳಿಗೆ ಹೋರಾಟ ಮುಗಿಸಿತು.

ಮಹಮ್ಮದ್‌ ಅಬ್ಬಾಸ್‌ ಅವರನ್ನು ಔಟ್‌ ಮಾಡುವ ಮೂಲಕ ಹೆರಾತ್‌, 400 ವಿಕೆಟ್‌ ಕಬಳಿಸಿದವರ ಪಟ್ಟಿಗೆ ಸೇರ್ಪಡೆಯಾದರು. ಇದಕ್ಕಾಗಿ 84 ಪಂದ್ಯಗಳನ್ನು ತೆಗೆದುಕೊಂಡ ಅವರು ಈ ಸಾಧನೆ ಮಾಡಿದ ವಿಶ್ವದ 14ನೇ ಬೌಲರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಪಾಕಿಸ್ತಾನದ ಎದುರು 100 ವಿಕೆಟ್‌ ಗಳಿಸಿದ ಸಾಧನೆಗೂ  ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌:ಶ್ರೀಲಂಕಾ: ಮೊದಲ ಇನಿಂಗ್ಸ್‌: 154.5 ಓವರ್‌ಗಳಲ್ಲಿ 419 ಮತ್ತು 66.5 ಓವರ್‌ಗಳಲ್ಲಿ 138.

ಪಾಕಿಸ್ತಾನ: ಪ್ರಥಮ ಇನಿಂಗ್ಸ್‌: 162.3 ಓವರ್‌ಗಳಲ್ಲಿ 422 ಮತ್ತು 47.4 ಓವರ್‌ಗಳಲ್ಲಿ 114. ಫಲಿತಾಂಶ: ಶ್ರೀಲಂಕಾಕ್ಕೆ 21 ರನ್‌ ಗೆಲುವು. ಪಂದ್ಯಶ್ರೇಷ್ಠ: ರಂಗನಾ ಹೆರಾತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT