ಸ್ಟೀಫನ್ಸ್‌ಗೆ ಆಘಾತ ನೀಡಿದ ಮೆಕಾಲೆ

ಮಂಗಳವಾರ, ಜೂನ್ 25, 2019
26 °C
ಚೀನಾ ಓಪನ್ ಟೆನಿಸ್; ಹಿಂದೆ ಸರಿದ ಮುಗುರುಜಾ

ಸ್ಟೀಫನ್ಸ್‌ಗೆ ಆಘಾತ ನೀಡಿದ ಮೆಕಾಲೆ

Published:
Updated:
ಸ್ಟೀಫನ್ಸ್‌ಗೆ ಆಘಾತ ನೀಡಿದ ಮೆಕಾಲೆ

ಬೀಜಿಂಗ್‌: ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಗಾರ್ಬೈನ್ ಮುಗುರುಜಾ ಹಾಗೂ ಅಮೆರಿಕ ಓಪನ್ ಗೆದ್ದುಕೊಂಡಿದ್ದ ಸೊಲಾನೆ ಸ್ಟೀಫನ್ಸ್‌ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ.

ಸ್ಪೇನ್‌ನ ಆಟಗಾರ್ತಿ ಮುಗುರುಜಾ 1–6ರಲ್ಲಿ ಮೊದಲ ಸೆಟ್ ಸೋತರು. ಎರಡನೇ ಸೆಟ್ ಆರಂಭವಾದ ಕೆಲವು ನಿಮಿಷಗಳ ಬಳಿಕ ಅವರು ಪಂದ್ಯದಿಂದ ಹಿಂದೆಸರಿದರು. ಆಟದ ವೇಳೆ ಪಾದದ ಗಾಯ ಅವರನ್ನು ಕಾಡಿತು. ನೋವು ಹೆಚ್ಚಾದ ಕಾರಣ ಅವರು ಮುಂದಿನ ಸೆಟ್ ಆಡದಿರಲು ನಿರ್ಧರಿಸಿದರು. ಜೆಕ್ ಗಣರಾಜ್ಯದ ಆಟಗಾರ್ತಿ ಬಾರ್ಬರಾ ಸ್ಟ್ರೆಕೋವಾ ಅವರಿಗೆ ಅದೃಷ್ಟದ ಜಯ ಲಭಿಸಿದೆ.

23 ವರ್ಷದ ಆಟಗಾರ್ತಿ ಮುಗುರುಜಾ ಪ್ರಸಕ್ತ ಋತುವಿನ ವಿಂಬಲ್ಡನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಎರಡನೇ ಸೆಟ್‌ನಲ್ಲಿ 2–0ಯಲ್ಲಿ ಹಿಂದಿದ್ದ ವೇಳೆ ಅವರು ಪ್ರಯಾಸದಿಂದ ಆಡುತ್ತಿದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಸೊಲಾನೆ 3–6, 0–6ರಲ್ಲಿ ಅಮೆರಿಕದ ಆಟಗಾರ್ತಿ ಕ್ರಿಸ್ಟಿನಾ ಮೆಕಾಲೆ ಎದುರು ಆಘಾತ ಅನುಭವಿಸಿದ್ದಾರೆ. ಮೆಕಾಲೆ ರ‍್ಯಾಂಕಿಂಗ್‌ನಲ್ಲಿ 79ನೇ ಸ್ಥಾನದಲ್ಲಿ ಇದ್ದಾರೆ. ಮಳೆಯಿಂದಾಗಿ ತಡವಾಗಿದ್ದ ಪಂದ್ಯದಲ್ಲಿ ಸ್ಟೀಫನ್ಸ್ ಉತ್ತಮ ಆರಂಭ ಪಡೆದಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry