ವಿಜಯಶ್ರೀ ಸಬರದಗೆ ಕದಳಿ ಪ್ರಶಸ್ತಿ

ಗುರುವಾರ , ಜೂನ್ 20, 2019
24 °C

ವಿಜಯಶ್ರೀ ಸಬರದಗೆ ಕದಳಿ ಪ್ರಶಸ್ತಿ

Published:
Updated:
ವಿಜಯಶ್ರೀ ಸಬರದಗೆ ಕದಳಿ ಪ್ರಶಸ್ತಿ

ಬೆಂಗಳೂರು: ಕದಳಿ ಮಹಿಳಾ ವೇದಿಕೆಯ 2017ನೇ ಸಾಲಿನ ‘ಕದಳಿ’ ಪ್ರಶಸ್ತಿಯನ್ನು ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ವಿಜಯಶ್ರೀ ಸಬರದ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 5,000 ನಗದು ಬಹುಮಾನ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಗೊ.ರು.ಚನ್ನಬಸಪ್ಪ, ‘ಇಂದಿನ ಸಮಾಜವು ತಾನು ನಡೆದಂತೆಯೇ ನಡೆಯಬೇಕು ಎಂಬ ನಿರೀಕ್ಷೆಯನ್ನು ಹೊಂದಿದೆ. ಹೀಗಾಗಿ, ಏನನ್ನೂ ಪ್ರಶ್ನೆ ಮಾಡದ ಸ್ಥಿತಿಯಲ್ಲಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಪ್ರ‌ಶ್ನೆ ಮಾಡಿದರೆ ಏನಾಗುತ್ತದೆ ಎಂದು ಇತ್ತೀಚಿನ ದಿನಗಳಲ್ಲಿ ನೋಡಿದ್ದೇವೆ. ಕೊಲೆಗಾರರಿಗೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯಾದರೇನು, ಪತ್ರಕರ್ತೆ ಗೌರಿ ಲಂಕೇಶ್ ಆದರೇನು. ಭಯಾನಕ, ಕಳವಳಕಾರಿ ಸನ್ನಿವೇಶದಲ್ಲಿ ಬದುಕುತ್ತಿರುವ ನಾವು ಎಚ್ಚರಗೊಂಡು ನಿರ್ಭೀತ ವಾತಾವರಣ ನಿರ್ಮಿಸಬೇಕಿದೆ’ ಎಂದರು.

‘ವಿಚಾರಧಾರೆಗಳನ್ನು ಪರಸ್ಪರ ಆತ್ಮೀಯವಾಗಿ ವಿನಿಮಯ ಮಾಡಿಕೊಳ್ಳಲಾಗದ, ಅನೀತಿ ಬಗ್ಗೆ ಚಕಾರವೆತ್ತದ ವಿಕೃತಮಯ ಹಾಗೂ ವಿವೇಚನಹೀನ ಈ ವ್ಯವಸ್ಥೆಯಿಂದ ಬಿಡುಗಡೆ ಹೊಂದಬೇಕಿದೆ. ಅದಕ್ಕಾಗಿ 12ನೇ ಶತಮಾನದ ಶರಣ–ಶರಣೆಯರ ವಿಚಾರಧಾರೆಗಳತ್ತ ಮುಖಮಾಡಬೇಕು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry