ಸಮುದ್ರ ಪಾಲಾದ ಇಬ್ಬರು ಮಕ್ಕಳ ಮೃತದೇಹ ಪತ್ತೆ

ಸೋಮವಾರ, ಜೂನ್ 17, 2019
23 °C

ಸಮುದ್ರ ಪಾಲಾದ ಇಬ್ಬರು ಮಕ್ಕಳ ಮೃತದೇಹ ಪತ್ತೆ

Published:
Updated:
ಸಮುದ್ರ ಪಾಲಾದ ಇಬ್ಬರು ಮಕ್ಕಳ ಮೃತದೇಹ ಪತ್ತೆ

ಭಟ್ಕಳ: ಮುರ್ಡೇಶ್ವರದ ಸಣ್ಣಬಾವಿ ಸಮೀಪ ಸಮುದ್ರದ ದಡದಲ್ಲಿ ಆಟವಾಡುತ್ತ ಸೋಮವಾರ ಕಾಣೆಯಾಗಿದ್ದ ಇಬ್ಬರು ಮಕ್ಕಳ ಮೃತದೇಹ ಮಂಗಳವಾರ ಕಾಯ್ಕಿಣಿ ಸಮುದ್ರ ದಡದಲ್ಲಿ ಪತ್ತೆಯಾಗಿವೆ.

ಮುರ್ಡೇಶ್ವರದ ಸಣ್ಣಬಾವಿ ನಿವಾಸಿಗಳಾಗಿದ್ದ ಗಣೇಶ ನಾಯ್ಕ (೧೨) ಮತ್ತು ವಿನಾಯಕ ನಾಯ್ಕ (೧೪) ಮೃತ ಬಾಲಕರು.

ನೀರಿನ ಸೆಳೆತಕ್ಕೆ ಸೋಮವಾರ ಕೊಚ್ಚಿಹೋಗಿದ್ದ ಅವರಿಗಾಗಿ ನಡೆಸಿದ್ದ ಶೋಧ ಕಾರ್ಯ ವಿಫಲವಾಗಿತ್ತು.

ಲಾರಿ ಪಲ್ಟಿ: ಕ್ಲೀನರ್ ಸ್ಥಳದಲ್ಲೇ ಸಾವು

ಅಂಕೋಲಾ: ತಾಲ್ಲೂಕಿನ ಮೂಲೆಮನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕಲ್ಲಘಟಗಿ ಮೂಲದ ಶರೀಫ್ ಎಂಬಾತ ಸಾವಿಗೀಡಾಗಿದ್ದಾರೆ.

ಲಾರಿ ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆ ಸಾಗುತ್ತಿದ್ದು. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ.

ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry