ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃತ್ತಿ ರಂಗಭೂಮಿಯೂ ಸಂಕಷ್ಟದಲ್ಲಿ’

ಅಕ್ಕಿಆಲೂರಿನಲ್ಲಿ ಗುರು ಕುಮಾರೇಶ್ವರ ನಾಟ್ಯ ಸಂಘದ ಸಂಸ್ಥಾಪನಾ ದಿನ
Last Updated 3 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ಜಂಜಾಟದ ಬದುಕಿನ ನಡುವೆಯೂ ಕಲೆಯನ್ನು ಪ್ರೀತಿಸಿ, ಗೌರವಿಸಿದರೆ ನೆಮ್ಮದಿ ಸಿಗಲು ಸಾಧ್ಯವಿದೆ’ ಎಂದು ಸ್ಥಳೀಯ ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ ನುಡಿದರು.

ಕಲ್ಲಾಪುರ ಕ್ರಾಸ್‌ ಬಳಿಯ ರಂಗಸಜ್ಜಿಕೆಯಲ್ಲಿ ನವಲಗುಂದದ ಗುರು ಕುಮಾರೇಶ್ವರ ನಾಟ್ಯ ಸಂಘದ ಸಂಸ್ಥಾಪನಾ ದಿನ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾಡು–ನುಡಿ ಸೇವೆಯಲ್ಲಿ ಕಲೆಯನ್ನು ಶ್ರೀಮಂತಗೊಳಿಸುವುದೂ ಸೇರಿದೆ. ಬದುಕಿನೊಂದಿಗೆ ಕಲೆ ಹಾಸುಹೊಕ್ಕಾಗಿದೆ. ಅದನ್ನು ನೋಡುವ ದೃಷ್ಟಿಕೋನ ಅಗತ್ಯ. ಗ್ರಾಮೀಣ ರಂಗಭೂಮಿ ಕಣ್ಮರೆಯಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಸಂದೇಹ ಎಲ್ಲರಲ್ಲಿಯೂ ಮನೆಮಾಡಿದೆ. ವೃತ್ತಿ ರಂಗಭೂಮಿಯೂ ಕೂಡ ಈಗ ವಿರಳ ಎನ್ನುವಂತಾಗಿದೆ’ ಎಂದು ವಿಷಾದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ‘ವೈಚಾರಿಕತೆ ಬೆಳೆಸುವ ನಾಟಕಗಳ ಪ್ರದರ್ಶನ ಹೆಚ್ಚೆಚ್ಚು ನಡೆಯಬೇಕಿದೆ. ಸಿನಿಮಾ, ದೂರದರ್ಶನ ಮತ್ತು ನಾಟಕಗಳ ಮಧ್ಯೆ ಸ್ಪರ್ಧೆ ಹೆಚ್ಚುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಹಾನಗಲ್ ತಾಲ್ಲೂಕು ಶಿಕ್ಷಣ ಸಂಘದ ನಿರ್ದೇಶಕ ರಾಜಣ್ಣ ಅಂಕಸಖಾನಿ ಮಾತನಾಡಿ, ‘ವಾಸ್ತವವನ್ನು ತೆರೆದಿಡುವ ರಂಗ ಚಟುವಟಿಕೆಗಳು ಸಮುದಾಯಕ್ಕೆ ಒಂದು ಪಾಠ ಶಾಲೆ ಇದ್ದಂತೆ’ ಎಂದು ಅಭಿಪ್ರಾಯಪಟ್ಟರು. ನಿವಾಸ್ ಬೋಚಗೇರಿ, ಕೆ.ಎನ್.ಮಂಜುನಾಥ್ ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT