ವಿರೂಪಗೊಂಡ ಮಹಾತ್ಮನ ಪ್ರತಿಮೆ

ಗುರುವಾರ , ಜೂನ್ 27, 2019
30 °C

ವಿರೂಪಗೊಂಡ ಮಹಾತ್ಮನ ಪ್ರತಿಮೆ

Published:
Updated:

ಕೆಜಿಎಫ್: ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಸ್ಥಾಪಿಸಲಾಗಿದ್ದ ನಗರದ ಗುರುಭವನದ ಆವರಣದಲ್ಲಿ ಸ್ಥಾಪಿಸಲ್ಪಟ್ಟಿದ್ದ ಮಹಾತ್ಮಗಾಂಧಿಯ ವಿರೂಪ ಪ್ರತಿಮೆ ಸೋಮವಾರ ಅನಾವರಣಗೊಂಡಿತು.

ಸುಮಾರು ನಾಲ್ಕು ದಶಕಗಳ ಹಿಂದೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಆಗಿನ ಡಿಸಿಎಂ ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದರು. ನಂತರ ಶಾಲೆ ಮುಚ್ಚಿ ಪ್ರದೇಶವನ್ನು ಗುರುಭವನ ನಿರ್ಮಾಣಕ್ಕೆಂದು ಶಿಕ್ಷಣ ಇಲಾಖೆಗೆ ನೀಡಲಾಯಿತು.

ಗುರುಭವನ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮವಾಗಿ ಕಟ್ಟಡದ ಭಾಗವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತು. ಅದರ ಮುಂದೆ ಇದ್ದ ಗಾಂಧಿ ಪ್ರತಿಮೆ ಸಹ ಕಿಡಿಗೇಡಿಗಳ ಸಾಹಸಕ್ಕೆ ಸಿಲುಕಿ ವಿರೂಪಗೊಂಡಿತು.

ವಾರ್ಡಿನ ನಗರಸಭೆ ಸದಸ್ಯೆ ದೀಪಾರಾಂಖ, ಸಮಾಜ ಸೇವಕ ನವೀನ್‌ಜೈನ್‌ ಈ ಸಂಬಂಧವಾಗಿ ನಗರಸಭೆಗೆ ಮನವಿ ನೀಡಿ, ವಿರೂಪಗೊಂಡ ಪ್ರತಿಮೆಯನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದರು. ಈಚೆಗೆ ಕಟ್ಟಡದ ಬಳಿಗೆ ಬಂದಿದ್ದ ಜಿಲ್ಲಾಧಿಕಾರಿ ಡಾ.ತ್ರಿಲೋಕಚಂದ್ರರವರಿಗೆ ಸಹ ಮನವಿ ನೀಡಿ, ವಿರೂಪಗೊಂಡ ಗಾಂಧಿ ಪ್ರತಿಮೆಯನ್ನು ಕೂಡಲೇ ತೆಗೆಯಬೇಕು. ಬೇರೆ ಪುತ್ಥಳಿ ಇಟ್ಟು ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಆದರೆ ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮಕೈಗೊಳ್ಳಲಿಲ್ಲ. ಸಮಾಜ ಸೇವಕ ನವೀನ್‌ ಜೈನ್ ದೊಡ್ಡ ಬಟ್ಟೆಯನ್ನು ಸುತ್ತಿ ವಿರೂಪವನ್ನು ಮುಚ್ಚಿಟ್ಟರು. ನಂತರ ನಗರಸಭೆ ಅಧಿವೇಶನದಲ್ಲಿ ಸದಸ್ಯೆ ದೀಪಾರಾಂಖ ಈ ವಿಷಯವನ್ನು ಪ್ರಸ್ಥಾಪಿಸಿ ರಾಷ್ಟ್ರಪಿತನಿಗೆ ಅಗೌರವ ನಡೆಯುವ ಕೆಲಸ ಆಗುತ್ತಿದೆ. ಕೂಡಲೇ ಪುತ್ಥಳಿಯನ್ನು

ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಕೋರಿದ್ದರು.

ಈ ನಡುವೆ ಗಾಂಧಿ ಪುತ್ಥಳಿಗೆ ಹೊದಿಸಿದ್ದ ಬಟ್ಟೆಯನ್ನು ಸಹ ಕಿಡಿಗೇಡಿಗಳು ಕಿತ್ತುಹಾಕಿ, ಗಾಂಧಿ ಜಯಂತಿಯಂದು ಮಹಾತ್ಮನ ವಿರೂಪ ಪ್ರತಿಮೆ ಕಾಣುವಂತೆ ಮಾಡಿದರು.

ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಸೋಮವಾರ ಪುನಾ ಮಹಾತ್ಮಗಾಂಧಿಗೆ ದೊಡ್ಡ ಪ್ಲಾಸ್ಟಿಕ್‌ ಕವರ್‌ ಹಾಕಿ, ವಿರೂಪವನ್ನು ಮುಚ್ಚಿಹಾಕಿದರು.

***

ರಾಬರ್ಟಸನ್‌ಪೇಟೆ ನಗರಸಭೆ ಮಹಾತ್ಮಗಾಂಧಿಗೆ ಅಗೌರವ ತೋರುತ್ತಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ

ದೀಪಾರಾಂಖ, ನಗರಸಭೆ ಸದಸ್ಯೆ

***

ಗಾಂಧಿ ಪ್ರತಿಮೆಯನ್ನು ತೆಗೆಯುವಂತೆ ನಗರಸಭೆಗೆ ಮತ್ತೊಮ್ಮೆ ಪತ್ರ ಬರೆಯಲಾಗುವುದು

ಶಂಕರ್‌ ಕಾವಲಿ, ಕ್ಷೇತ್ರ ಶಿಕ್ಷಣಾಧಿಕಾರಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry