ಸ್ಟಾರ್ ಹುಟ್ಟುಹಬ್ಬ

ಶುಕ್ರವಾರ, ಮೇ 24, 2019
23 °C

ಸ್ಟಾರ್ ಹುಟ್ಟುಹಬ್ಬ

Published:
Updated:
ಸ್ಟಾರ್ ಹುಟ್ಟುಹಬ್ಬ

'ಇತಿ ಶ್ರೀಕಂಠ' ಎನ್ನುವ ಬಂಗಾಳಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದವರು ಬಾಲಿವುಡ್ ನಟಿ ಸೋಹಾ ಅಲಿ ಖಾನ್ (ಜನನ- ಅಕ್ಟೋಬರ್ 4, 1978). ನಟಿ ಶರ್ಮಿಳಾ ಠಾಗೋರ್ ಮತ್ತು ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಟಿ ಮಗಳು. ಆರಂಭದ ದಿನಗಳಲ್ಲಿ ಅಮ್ಮನಂತೆಯೇ ಸಿನಿಮಾ ಜಗತ್ತಿನಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಹಂಬಲ ಅವರಿಗಿತ್ತು. ಅಣ್ಣ ಸೈಫ್ ಅಲಿಖಾನ್‌ನಷ್ಟು ಯಶಸ್ಸು ಸೋಹಾಗೆ ಸಿಗಲಿಲ್ಲ.

ಸೋಹಾ 28ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಕುಲಾನ್ ಖೇಮು ಅವರನ್ನು ಪ್ರೀತಿಸಿ ಮದುವೆಯಾದ ಈಕೆ, ಇದೀಗ ಹೆಣ್ಣುಮಗುವಿನ ತಾಯಿ. ರಂಗ್ ದೇ ಬಸಂತಿ, ದಿಲ್ ಮಾಂಗೇ ಮೋರ್, 31 ಅಕ್ಟೋಬರ್, ಘಾಯಲ್ ಒನ್ಸ್ ಅಗೇನ್, ಮುಂಬೈ ಮೇರಿ ಜಾನ್, ಶಾದಿ ನಂ.1, ತುಮ್ ಮಿಲೆ ಚಿತ್ರಗಳಲ್ಲಿ ಸೋಹಾ ನಟನೆ ಸಿನಿ ಪ್ರಿಯರ ಮನಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry