ಇ.ಡಿ.ಯಿಂದ ಕೆಎಸ್‌ಎಸ್‌ಪಿಎಲ್‌ನ ₹32,175 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಮಂಗಳವಾರ, ಜೂನ್ 18, 2019
25 °C

ಇ.ಡಿ.ಯಿಂದ ಕೆಎಸ್‌ಎಸ್‌ಪಿಎಲ್‌ನ ₹32,175 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Published:
Updated:
ಇ.ಡಿ.ಯಿಂದ ಕೆಎಸ್‌ಎಸ್‌ಪಿಎಲ್‌ನ ₹32,175 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್‌ ಸ್ಪಾಂಜ್ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ನ(ಕೆಎಸ್‌ಎಸ್‌ಪಿಎಲ್‌) ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ(ಪಿಎಂಎಲ್‌ಎ) ಕಮಲ್‌ ಸ್ಪಾಂಜ್ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ನ ₹32,175 ಕೋಟಿ ಮೌಲ್ಯದ ಆಸ್ತಿಯನ್ನು ಮಂಗಳವಾರ ಮಟ್ಟುಗೋಲು ಹಾಕಿಕೊಂಡಿದೆ.

ಮಧ್ಯಪ್ರದೇಶದಲ್ಲಿ ಥೆಸ್ಗೊರಾ–ಬಿ ರುದ್ರಪುರಿ ಕಲ್ಲಿದ್ದಲು ನಿಕ್ಷೇಪವನ್ನು ಕಮಲ್‌ ಸ್ಪಾಂಜ್ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ಗೆ ಹಂಚಿಕೆ ಮಾಡಿದ ಪ್ರಕರಣ ಇದು.

ತಪ್ಪಿತಸ್ಥರಿಗೆ ಶಿಕ್ಷೆ: ಪ್ರಕರಣ ವಿವರ
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಕರಣ ತಪ್ಪಿತಸ್ಥ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾಗೆ ಸಿಬಿಐನ ವಿಶೇಷ ನ್ಯಾಯಾಲಯ ಇದೆ ವರ್ಷ ಮೇನಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಪ್ರಕರಣ ಇತರ ಇಬ್ಬರು ಅಪರಾಧಿಗಳಾದ ಕಲ್ಲಿದ್ದಲು ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್‌. ಕ್ರೋಫ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಿಭಾಗದ ಅಂದಿನ ನಿರ್ದೇಶಕ ಕೆ.ಸಿ. ಸಮಾರಿಯಾ ಅವರಿಗೂ ಇದೇ ಶಿಕ್ಷೆಯನ್ನು ವಿಧಿಸಿತ್ತು.

ಮೂವರು ಅಪರಾಧಿಗಳಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಕಮಲ್‌ ಸ್ಪಾಂಜ್ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ಗೆ (ಕೆಎಸ್‌ಎಸ್‌ಪಿಎಲ್‌) ₹1 ಕೋಟಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಶಿಕ್ಷೆ ತೀರ್ಪು ಆದೇಶದ ಬಲಿಕ, ತಪ್ಪಿತಸ್ಥರಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿತ್ತು. ಪ್ರಕರಣ ಸಂಬಂಧ ಶಿಕ್ಷೆ ವಿಧಿಸುವ ಕೆಲ ದಿನಗಳ ಹಿಂದೆಯಷ್ಟೇ ಗುಪ್ತಾ ಸೇರಿದಂತೆ ಮೂವರು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪುನೀಡಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry