ಸೋಮವಾರ, ಸೆಪ್ಟೆಂಬರ್ 16, 2019
29 °C

ಲಂಡನ್‌ ಪೊಲೀಸರಿಂದ ಉದ್ಯಮಿ ವಿಜಯ್ ಮಲ್ಯ ಬಂಧನ

Published:
Updated:
ಲಂಡನ್‌ ಪೊಲೀಸರಿಂದ ಉದ್ಯಮಿ ವಿಜಯ್ ಮಲ್ಯ ಬಂಧನ

ಲಂಡನ್: ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ ಬ್ರಿಟನ್‌ಗೆ ತೆರಳಿದ್ದ ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅವರನ್ನು ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.

ಅಕ್ರಮ ಹಣಕಾಸು ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ ಅವರನ್ನು ಬಂಧಿಸಲಾಗಿದೆ ಎಂದು ದೂರದರ್ಶನ ವರದಿ ಮಾಡಿದೆ.

ವಿಜಯ್ ಮಲ್ಯ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಎಂದು ನ್ಯೂಸ್ 18 ಸಹ ಟ್ವೀಟ್ ಮಾಡಿದೆ.

ವಿವಿಧ ಬ್ಯಾಂಕ್‌ಗಳ 9 ಸಾವಿರ ಕೋಟಿ (ಅಂದಾಜು) ಸಾಲ ಮರುಪಾವತಿ ಮಾಡದೆ ಮಲ್ಯ ಅವರು ಬ್ರಿಟನ್‌ಗೆ ತೆರಳಿದ್ದರು.  ಅವರ ವಿರುದ್ಧ ಈ ಹಿಂದೆಯೇ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಹಲವು ಜಾಮೀನು ರಹಿತ ವಾರಂಟ್‌ಗಳನ್ನೂ ಜಾರಿ ಮಾಡಲಾಗಿದೆ.

Post Comments (+)