ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಬೆಳ್ಳೆತೆರೆಗೆ ವಿಕ್ರಮ್ ಮಗ

Published:
Updated:
ಬೆಳ್ಳೆತೆರೆಗೆ ವಿಕ್ರಮ್ ಮಗ

ತಮಿಳಿನ ಖ್ಯಾತ ನಟ ವಿಕ್ರಮ್ ಅವರ ಮಗ ಧ್ರುವ ’ಅರ್ಜುನ ರೆಡ್ಡಿ’ ಸಿನಿಮಾದ ರಿಮೇಕ್‌ನಲ್ಲಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಮಗನ ಸಿನಿ ಪ್ರವೇಶವನ್ನು ತಂದೆ ವಿಕ್ರಮ್ ಸ್ಪಷ್ಟಪಡಿಸಿದ್ದು, ’ಅರ್ಜುನ ರೆಡ್ಡಿ’ ಪಾತ್ರದಲ್ಲಿ ಧ್ರುವ ನಟಿಸಲಿದ್ದಾನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದ ನಿರ್ಮಾಪಕ ಮುಖೇಶ್ ಮೆಹ್ತಾ ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ’ಧ್ರುವ ವಿಕ್ರಮ್ ನಾಯಕನಾಗಿ ’ಅರ್ಜುನ ರೆಡ್ಡಿ’ಯಲ್ಲಿ ನಟಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿಕೊಂಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರೇಮಕಥೆಯನ್ನು ಹೊಂದಿರುವ ‘ಅರ್ಜುನ ರೆಡ್ಡಿ’ ಆಧುನಿಕ ದೇವದಾಸನನ್ನು ಚಿತ್ರಿಸುವಂತಿದೆ.

Post Comments (+)