‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕೆಂದು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ’

ಗುರುವಾರ , ಜೂನ್ 20, 2019
26 °C

‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕೆಂದು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ’

Published:
Updated:
‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕೆಂದು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ’

ತಿರುವನಂತಪುರ: ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕು ಎಂಬುದನ್ನು ಕೇರಳ ಸರ್ಕಾರವನ್ನು ನೋಡಿ ಕಲಿಯಿರಿ ಎಂದು ಆಡಳಿತಾರೂಢ ಸಿಪಿಎಂ ಪಕ್ಷವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲಹೆ ನೀಡಿದೆ.

ಬಿಜೆಪಿಯು ಕೇರಳದಲ್ಲಿ ಆರಂಭಿಸಿರುವ ‘ಜನ ರಕ್ಷಾ ಯಾತ್ರೆ’ಯಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್ ಬುಧವಾರ ಕೇರಳಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸಿಪಿಎಂ, ‘ಆಸ್ಪತ್ರೆಗಳನ್ನು ಹೇಗೆ ದಕ್ಷವಾಗಿ ನಡೆಸಬೇಕು ಎಂಬುದನ್ನು ಕೇರಳ ಸರ್ಕಾರವನ್ನು ನೋಡಿ ಕಲಿಯಲಿ. ಅದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಹೇಳಿದೆ.

ಗೋರಖಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ಕನಿಷ್ಠ 60 ಮಕ್ಕಳು ಮೃತಪಟ್ಟಿದ್ದರು. ಸರ್ಕಾರದ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ದುರಂತವು ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು.

ಇದನ್ನೂ ಓದಿ...
ಪಿಣರಾಯಿ ವಿಜಯನ್‌ ತವರು ಜಿಲ್ಲೆಯಲ್ಲಿ ‘ಜನ ರಕ್ಷಾ ಯಾತ್ರೆ’ಗೆ ಅಮಿತ್‌ ಷಾ ಚಾಲನೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry